Select Your Language

Notifications

webdunia
webdunia
webdunia
webdunia

ಮಹಿಳೆಯರಿಗೆ ನಿಂದಿಸುವ ಸಂಸ್ಕ್ರತಿ ನಮ್ಮದಲ್ಲ, ಬಿಜೆಪಿಯದ್ದು: ಲಕ್ಷ್ಮೀ ಹೆಬಾಳ್ಕರ್

ಮಹಿಳೆಯರಿಗೆ ನಿಂದಿಸುವ ಸಂಸ್ಕ್ರತಿ ನಮ್ಮದಲ್ಲ, ಬಿಜೆಪಿಯದ್ದು: ಲಕ್ಷ್ಮೀ ಹೆಬಾಳ್ಕರ್
ಬೆಳಗಾವಿ , ಸೋಮವಾರ, 23 ಜನವರಿ 2017 (14:36 IST)
ಬಿಜೆಪಿ ಶಾಸಕ ಸಂಜಯ್ ಪಾಟೀಲ್ ಆಪ್ತ ಸನತ್ ಕುಮಾರ್ ಮನೆಗೆ ನುಗ್ಗಿ ತಮ್ಮ ಸಹೋದರ ಗೂಂಡಾಗಿರಿ ವರ್ತನೆ ತೊರಿದ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಲಕ್ಷ್ಮೀ ಹೆಬಾಳ್ಕರ್, ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಇಲ್ಲ. ಮನೆಗೆ ನುಗ್ಗಿ ಮಹಿಳೆಯರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುವ ಸಂಸ್ಕ್ರತಿ ನಮ್ಮದಲ್ಲ ಎಂದಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನೆಗೆ ನುಗ್ಗಿ ಗಾಜು ಒಡೆಯುವುದು, ಮಹಿಳೆಯರಿಗೆ ನಿಂದಿಸುವ ಸಂಸ್ಕ್ರತಿ ನಮ್ಮದಲ್ಲ. ಸುಮ್ಮನೆ ನಮ್ಮ ವಿರುದ್ಧ ಆರೋಪ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
 
ಒಂದು ವೇಳೆ ಗಲಾಟೆ ಆಗಿದ್ರೆ ಕಲ್ಲುಗಳ ಮೇಲೆ ಫಿಗರ್ ಪ್ರಿಂಟ್ ಇರುತ್ತೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬರಬೇಕು. ಸನತ್ ಕುಮಾರ್ ಅವರೇ ತಮ್ಮ ಮನೆಯ ಗಾಜು ಒಡೆದು ನಮ್ಮ ವಿರುದ್ಧ ಆರೋಪಿಸುತ್ತಿದ್ದಾರೆ ಎಂದು ದೂರಿದರು. 
 
ವಿಜಯಪುರದಲ್ಲಿ ನಮ್ಮ ಗೆಲವು ಸಹಿಸದೇ ಬಿಜೆಪಿಯವರು ಬಸವಣ್ಣನ ಮೂರ್ತಿಗೆ ಅವಮಾನ ಮಾಡಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸಲು ಯತ್ನಿಸಿದ್ದಾರೆ. ಇಂತಹ ಆರೋಪ ಮಾಡುವಲ್ಲಿ ಬಿಜೆಪಿಯವರು ನಿಸ್ಸೀಮರು ಎಂದು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಲಕ್ಷ್ಮೀ ಹೆಬಾಳ್ಕರ್ ವಾಗ್ದಾಳಿ ನಡೆಸಿದರು. 
 
ಲಕ್ಷ್ಮೀ ಹೆಬಾಳ್ಕರ್ ಸಹೋದರ ಸೇರಿದಂತೆ ಸುಮಾರು 25 ಜನರು ಬಿಜೆಪಿ ಶಾಸಕ ಸಂಜಯ್ ಪಾಟೀಲ್ ಆಪ್ತ ಸನತ್ ಕುಮಾರ್ ಮನೆಗೆ ನುಗ್ಗಿ ಗೂಂಡಾಗಿರಿ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನೇತಾಜಿ 120ನೇ ಜನ್ಮದಿನ: ಪ್ರಧಾನಿ ಗೌರವಾರ್ಪಣೆ