ಮಾ.12ರಿಂದ ನಿಮ್ಮ ಮನೆ ಬಾಗಿಲಿಗೆ ಪಹಣಿ, ಜಾತಿ-ಆದಾಯ ಪ್ರಮಾಣಪತ್ರ ಬರಲಿದೆ ಅಂತ ಕಂದಾಯ ಸಚಿವ ಅಶೋಕ್ ಅವರು ಹೇಳಿದ್ದಾರೆ. ಅವರು ಇಂದು ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಗೋವಿಂದರಾಜು ಪ್ರಶ್ನೆಗೆ ಉತ್ತರಿಸಿ ಈ ಬಗ್ಗೆ ಮಾಹಿತಿ ನೀಡಿದರು.
ಇದೇ ವೇಳೆ ಮಾತನಾಡುತ್ತ, ಮಾರ್ಚ್ 12ರಂದು ಈ ಯೋಜನೆಗೆ ಚಾಲನೆ ನೀಡಲಿದ್ದು, ಅಂದು 45 ಲಕ್ಷ ರೈತರ ಮನೆ ಬಾಗಿಲಿಗೆ ದಾಖಲೆಗಳನ್ನು ತಲುಪಿಸಲಾಗುತ್ತದೆ ಅಂತ ಮಾಹಿತಿ ನೀಡಿದರು. ಇನ್ನೂ ಇದೇ ವೇಳೆ ಅವರು ತಮ್ಮ ಮಾತನ್ನು ಮುಂದುವರೆಸಿ, ರಾಜ್ಯಾದ್ಯಂತ 700ಕ್ಕೂ ಹೆಚ್ಚು ಜನಸೇವಾ ಕೇಂದ್ರಗಳಿಂದ ರೈತರಿಗೆ ವಿವಿಧ ಸೇವೆ ಕೊಡಲಾಗುತ್ತಿದೆ. ಪಹಣಿ, ಮ್ಯುಟೇಷನ್ ಇತ್ಯಾದಿ ನೀಡಲಾಗುತ್ತಿದೆ. ಇದಕ್ಕೆ ಕನಿಷ್ಠ ದರವಾಗಿ 15 ರೂ. ಶುಲ್ಕ ಪಡೆಯಲಾಗುತ್ತಿದೆ. ಡೇಟಾ ವೆಚ್ಚ, ಪರಿಕರ ವೆಚ್ಚಗಳನ್ನು ನಿಭಾಯಿಸಲ ಈ ಹಣ ಪಡೆಯಲಾಗುತ್ತಿದೆ. ಆನ್ ಲೈನ್ನಲ್ಲೇ ನೋಡಲು ಶುಲ್ಕವಿಲ್ಲ. ಆದರೆ, ಪಹಣಿ, ಮ್ಯುಟೇಷನ್ ಇತ್ಯಾದಿ ಪ್ರಿಂಟ್ ಪ್ರತಿ ಪಡೆಯಲು ಶುಲ್ಕ ಪಡೆಯಲಾಗುತ್ತದೆ ಅಂತ ತಿಳಿಸಿದರು. ಮಾರ್ಚ್ 12ರಂದು ರೈತರ ಪಹಣಿ, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರವನ್ನು ಕವರ್ನಲ್ಲಿ ಹಾಕಿ 45 ಲಕ್ಷ ರೈತರ ಮನೆ ಬಾಗಿಲಿಗೆ ನಾವೇ ತಲುಪಿಸಲಿದ್ದೇವೆ. ಇದನ್ನೆಲ್ಲಾ ಉಚಿತವಾಗಿ ಕೊಡಲಿದ್ದೇವೆ. ಐದು ವರ್ಷಕ್ಕೊಮ್ಮೆ ರೈತರಿಗೆ ಇವೆಲ್ಲಾ ದಾಖಲೆ ಉಚಿತವಾಗಿ ಕೊಡಬೇಕು ಎಂದು ಕಾನೂನಿನಲ್ಲೇ ಇದೇ ಅಂತ ತಿಳಿಸಿದರು.