Publish Date: Fri, 30 Sep 2022 (20:55 IST)
Updated Date: Fri, 30 Sep 2022 (20:57 IST)
ಕೋತಿಗಳಿಗೆ ಮತ್ತು ಬರುವ ಔಷಧ ಕೊಟ್ಟು ಕಿರಾತಕರು ಮರಕ್ಕೆ ನೇಣು ಹಾಕಿರುವ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮುರಾಳ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಕಿರಾತಕರ ಗ್ಯಾಂಗ್ ನಾಲ್ಕು ಮಂಗಗಳಿಗೆ ನೇಣು ಹಾಕಿ ಹುಚ್ಚಾಟ ಮೆರೆದಿದ್ದಾರೆ. ಮತ್ತು ಬರುವ ಔಷಧಿ ನೀಡಿ ಕೋತಿಗಳನ್ನು ಕೊಲ್ಲಲಾಗಿದೆ. ವಿಶ್ವ ಹಿಂದೂ ಪರಿಷತ್ತು ಕಾರ್ಯಕರ್ತರು ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೋತಿಗಳ ಮಾರಣಹೋಮಕ್ಕೆ ಕಾರಣರಾದವರನ್ನು ಬಂಧಿಸುವಂತೆ VHP ಮನವಿ ಮಾಡಿದೆ. ನಿಟ್ಟೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.