Select Your Language

Notifications

webdunia
webdunia
webdunia
webdunia

ಹುಡುಗಿಯ ಹೊಟ್ಟೆಯಲ್ಲಿತ್ತು ಕೂದಲ ಗಡ್ಡೆ

ಹುಡುಗಿಯ ಹೊಟ್ಟೆಯಲ್ಲಿತ್ತು ಕೂದಲ ಗಡ್ಡೆ
ಗೋಕಾಕ , ಬುಧವಾರ, 11 ಜನವರಿ 2017 (08:11 IST)
ಹೊಟ್ಟೆಯಲ್ಲಿ ಕೆಜಿಗಟ್ಟಲೆ ತೂಗುವ ಗಡ್ಡೆಯಾಗಿರುವ ಬಗ್ಗೆ ಕೇಳಿರುತ್ತೀರಾ. ಆದರೆ ಕೂದಲ ಗಡ್ಡೆ ಬಗ್ಗೆ ಎಂದಾದರೂ ಕೇಳಿದ್ದೀರಾ? ಇದು ವೈದ್ಯಲೋಕಕ್ಕೆ ಸವಾಲು ಎಸೆಯುವಂತ ಅಪರೂಪದ ಪ್ರಸಂಗ.
 
ಹೊಟ್ಟೆನೋವಿನಿಂದ ಬಳಲುತ್ತಿದ್ದ 20 ವರ್ಷದ ಯುವತಿಯ ಹೊಟ್ಟೆಯಿಂದ ಕೂದಲ ಗಡ್ಡೆಯನ್ನು ಹೊರತೆಗೆದ ಅಪರೂಪದ ಘಟನೆ ಬೆಳಗಾವಿಯ ಗೋಕಾಕ್‌ನಲ್ಲಿ ನಡೆದಿದೆ.
 
ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಯುವತಿ ಪ್ರತಿದಿನ ತನ್ನ ಕೂದಲನ್ನು ತಿನ್ನುತ್ತಿದ್ದಳು. ಹೀಗಾಗಿ ಇತ್ತೀಚಿಗೆ ಆಕೆಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಗೋಕಾಕ್‌ನ ಕಪ್ಪಲಗುದ್ದಿ ಆಸ್ಪತ್ರೆಗೆ ದಾಖಲಾಗಿದ್ದ ಆಕೆಯ ಹೊಟ್ಟೆಯಿಂದ ಕೂದಲಗಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ. 
 
ಪ್ರಖ್ಯಾತ ವೈದ್ಯ ದಂಪತಿ ಡಾ.ಬಿ.ಆರ್ ಕಪ್ಪಲಗುದ್ದಿ ಮತ್ತು ಡಾ.ಸರಳಾ ಕಪ್ಪಗುದ್ದಿ  ವೈದ್ಯಲೋಕಕ್ಕೆ ಸವಾಲಾದ ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಗೊಳಿಸಿದ್ದಾರೆ.ಯುವತಿ ಆರೋಗ್ಯದಿಂದಿದ್ದಾಳೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೀತಿ ಭಾಷೆಯಲ್ಲಿ ಒಂದಾದ ಕಾರವಾರದ ಹುಡುಗ, ರಷ್ಯಾದ ಹುಡುಗಿ