Select Your Language

Notifications

webdunia
webdunia
webdunia
webdunia

ಚೀನಾದ ಬಾಲಕನಿಗೆ H3N8 ಹಕ್ಕಿಜ್ವರ

ಚೀನಾದ ಬಾಲಕನಿಗೆ H3N8 ಹಕ್ಕಿಜ್ವರ
bangalore , ಗುರುವಾರ, 28 ಏಪ್ರಿಲ್ 2022 (19:54 IST)
ಚೀನಾದಲ್ಲಿ ಇದೇ ಮೊದಲ ಬಾರಿಗೆ H3N8 ಹಕ್ಕಿಜ್ವರ ಪತ್ತೆಯಾಗಿದೆ..ಮನುಷ್ಯರಲ್ಲಿ H3N8 ತಳಿಯ ಹಕ್ಕಿಜ್ವರ ಪತ್ತೆಯಾಗಿರುವುದು ಇದೇ ಮೊದಲು.. ಇದರಿಂದ ಮನುಷ್ಯರಿಗೆ ಅಷ್ಟೇನೂ ಹಾನಿಯಿಲ್ಲ, ಮನುಷ್ಯರಲ್ಲಿ ಹೆಚ್ಚಾಗಿ ಹರಡುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.. 2002ರಿಂದಲೂ H3N8 ವಿಶ್ವದಲ್ಲಿ ಅಸ್ತಿತ್ವದಲ್ಲಿದೆ..ಉತ್ತರ ಅಮೆರಿಕ ಬಾತು ಕೋಳಿಗಳಲ್ಲಿ ಈ ಸೋಂಕಿನ ಸೂಕ್ಷ್ಮ ಜೀವಿಗಳು ಮೊದಲ ಬಾರಿ ಪತ್ತೆಯಾಗಿದ್ದವು. ಕುದುರೆ, ನಾಯಿ ಮತ್ತು ಕಡಲು ಸಿಂಹಗಳಲ್ಲಿ ಸೋಂಕು ಹರಡಬಹುದು ಎಂಬ ಮುನ್ಸೂಚನೆ ನೀಡಲಾಗಿತ್ತು. ಆದರೆ ಮನುಷ್ಯರಲ್ಲಿ H3N8 ಸೋಂಕು ಹಿಂದೆಂದೂ ದೃಢಪಟ್ಟಿರಲಿಲ್ಲ. ಇದೇ ಮೊದಲ ಬಾರಿಗೆ ಚೀನಾದ ಹೆನಾನ್ ಪ್ರಾಂತ್ಯದಲ್ಲಿ ನಾಲ್ಕು ವರ್ಷದ ಬಾಲಕನೊಬ್ಬನಲ್ಲಿ ಸೋಂಕು ಪತ್ತೆಯಾಗಿದೆ..ಈ ಹುಡುಗನಿಗೆ ಪಕ್ಷಿಗಳಿಂದ ನೇರವಾಗಿ ಸೋಂಕು ತಗುಲಿದೆ. ಆದರೆ ಈಸೋಂಕು ಮನುಷ್ಯರಿಗೆ ಹರಡಬಹುದೇ ಎಂಬುದು ದೃಢಪಟ್ಟಿಲ್ಲ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೂಕಿಗೆ 5 ವರ್ಷ ಜೈಲು ಶಿಕ್ಷೆ