ಬಿಪಿಎಲ್ ಕಾರ್ಡ್ ನಂತೆ ಮೀಸಲಾತಿಯೂ ಉಳ್ಳವರಿಗೆ ಸಿಗಬಾರದು ಎಂಬ ಎಚ್ ವಿಶ್ವನಾಥ್ ಸಲಹೆಗೆ ನೀವೇನಂತೀರಿ

Krishnaveni K
ಶುಕ್ರವಾರ, 19 ಸೆಪ್ಟಂಬರ್ 2025 (08:42 IST)
ಬೆಂಗಳೂರು: ಇದೀಗ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಸೂಚನೆಯಂತೆ ಬಿಪಿಎಲ್ ಕಾರ್ಡ್ ನಲ್ಲಿ ಉಳ್ಳವರನ್ನು ಕಿತ್ತು ಹಾಕಿ ಬಡವರಿಗೆ ಮಾತ್ರ ಸಿಗುವಂತೆ ಕ್ರಮ ಕೈಗೊಳ್ಳುತ್ತಿದೆ. ಇದೇ ರೀತಿ ಮೀಸಲಾತಿಯಲ್ಲೂ ಉಳ್ಳವರಿಗೆ ಸಿಗಬಾರದು ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಆಗ್ರಹಿಸಿದ್ದಾರೆ. ಇದಕ್ಕೆ ನೀವೆನಂತೀರಿ?


ಬಿಪಿಎಲ್ ಕಾರ್ಡ್ ನಲ್ಲಿ ಎಷ್ಟೋ ಮಂದಿ ಶ್ರೀಮಂತರೂ ತಪ್ಪು ಮಾಹಿತಿ ನೀಡಿ ಲಾಭ ಪಡೆಯುತ್ತಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ. ಹೀಗಾಗಿ ರಾಜ್ಯ ಸರ್ಕಾರ ಬಡವರಿಗೆ ಇದರ ಅನುಕೂಲ ಸಿಗುವಂತಾಗಬೇಕು ಎಂಬ ಉದ್ದೇಶದಿಂದ ಕೆಲವು ಮಾನದಂಡಗಳನ್ನು ವಿಧಿಸಿ ಶ್ರೀಮಂತರನ್ನು ಬಿಪಿಎಲ್ ಪಟ್ಟಿಯಿಂದ ಕೈ ಬಿಡುತ್ತಿದೆ. ಇದು ನಿಜಕ್ಕೂ ಶ್ಲಾಘನೀಯ ಕೆಲಸ.

ಅದೇ ರೀತಿ ಮೀಸಲಾತಿಯಲ್ಲೂ ಇಂತಹದ್ದೊಂದು ಕ್ರಮವಾಗಬೇಕು ಎಂದು ವಿಶ್ವನಾಥ್ ಸಲಹೆ ನೀಡಿದ್ದಾರೆ. ಮೀಸಲಾತಿಯಲ್ಲೂ ಉಳ್ಳವರು ಮೀಸಲಾತಿ ಬಿಟ್ಟು ಕೊಡಬೇಕು. ಉಳ್ಳವರಿಗೆ ಮೀಸಲಾತಿ ತೆಗೆದು ಹಾಕುವ ಕಾಯ್ದೆಯನ್ನು ಸರ್ಕಾರ ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈಗಿರುವ ಪ್ರಕಾರ ನೀವು ಎಷ್ಟೇ ಶ್ರೀಮಂತರಾಗಿದ್ದರೂ ಪರಿಶಿಷ್ಟ ಜಾತಿ/ ಪಂಗಡ ಎಂಬಂತೆ ಮೀಸಲಾತಿ ಅನ್ವಯವಾಗುವ ಸಮುದಾಯದವರಾಗಿದ್ದರೆ ನಿಮಗೆ ಎಲ್ಲಾ ಕ್ಷೇತ್ರದಲ್ಲೂ ಮೀಸಲಾತಿ ಸಿಗುತ್ತದೆ. ಆದರೆ ಮೀಸಲಾತಿ ಇಲ್ಲದ ಒಂದು ಜಾತಿಗೆ ಸೇರಿದ ಬಡ ವ್ಯಕ್ತಿಯೂ ಅವಕಾಶ ವಂಚಿತನಾಗುತ್ತಿದ್ದಾನೆ. ಇಂತಹ ಅಸಮಾನತೆ ಹೋಗಲಾಡಿಸಲು ಮೀಸಲಾತಿಯಲ್ಲೂ ಉಳ್ಳವರು ಬಿಟ್ಟುಕೊಡುವ ಪದ್ಧತಿ ಬಂದರೆ ಹೇಗಿರುತ್ತದೆ? ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಲಾಲೋಕ ಮಳಿಗೆ, ಏನೆಲ್ಲಾ ಸಿಗಲಿದೆ ಗೊತ್ತಾ

ಕಾರು ಸ್ಫೋಟದ ಹಿಂದಿನ ಪ್ರತಿಯೊಬ್ಬ ಅಪರಾಧಿಯನ್ನು ಭೇಟೆಯಾಡಿ: ಅಮಿತ್ ಶಾ

ದೆಹಲಿಯಲ್ಲಿ ಕಾರು ಸ್ಫೋಟ: ರಾಜ್ಯದ ಈ ಜಿಲ್ಲೆಯಲ್ಲಿ ಹೆಚ್ಚಿನ ಭದ್ರತೆ

ಇದೇ ಕಾರಣಕ್ಕಾ ಪರಪ್ಪನ ಅಗ್ರಹಾರದಲ್ಲಿದ್ದ ಉಗ್ರನಿಗೆ ಮೊಬೈಲ್ ಕೊಡಲಾಯಿತೇ

ದೆಹಲಿ ಕಾರು ಸ್ಫೋಟ ತನಿಖೆಯಲ್ಲಿ ಮಹತ್ವದ ಬೆಳವಣಿಗೆ

ಮುಂದಿನ ಸುದ್ದಿ
Show comments