Select Your Language

Notifications

webdunia
webdunia
webdunia
webdunia

ಬೀದರ್ ನಲ್ಲಿ ಹೈ- ಕ ವಿಮೋಚನಾ ದಿನಾಚರಣೆ

ಬೀದರ್ ನಲ್ಲಿ ಹೈ- ಕ ವಿಮೋಚನಾ ದಿನಾಚರಣೆ
ಬೀದರ್ , ಸೋಮವಾರ, 17 ಸೆಪ್ಟಂಬರ್ 2018 (17:25 IST)
70ನೇ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಹಿನ್ನೆಲೆಯಲ್ಲಿ ಬೀದರ್ ನ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿಂದು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

ರಾಷ್ಟ್ರಧ್ವಜಾರೋಹಣ ನಂತರ ಪೊಲೀಸರು ಹಾಗೂ ಶಾಲಾ ಮಕ್ಕಳಿಂದ ಗೌರವ ವಂದನೆ ಸ್ವೀಕರಿಸಿದರು.
ಇದೇ ವೇಳೆ ವಿಶೇಷ ಚೇತನರಿಂದ ನಡೆದ ಪರೇಡ್ ವಿಶೇಷವಾಗಿತ್ತು.

ನಂತರ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಇನ್ನೂ ಕಾರ್ಯಕ್ರಮದಲ್ಲಿ ಬೀದರ್ ಸಂಸದ ಭಗವಂತ ಖೂಬಾ, ಶಾಸಕ ರಹೀಮ್ ಖಾನ್, ಪರಿಷತ್ ಸದಸ್ಯ ಅರವಿಂದ, ರಘುನಾಥ್ ಮಲ್ಕಾಪುರೆ, ವಿಜಯ್ ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ್, ಸಿಇಓ ಸೇಲ್ವಮಣಿ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.




Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಪರಿಕ್ಕರ್ ಆಸ್ಪತ್ರೆಯಲ್ಲಿರುವಾಗ ಗೋವಾದಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್ ಕಸರತ್ತು