Webdunia - Bharat's app for daily news and videos

Install App

ಸಿದ್ದರಾಮಯ್ಯ ಸಿಎಂ ಆಗಲಿಲ್ಲವೆಂದು ಕಣ್ಣೀರಿಟ್ಟಿದ್ದೆ: ಎಚ್.ಡಿ.ರೇವಣ್ಣ

Webdunia
ಮಂಗಳವಾರ, 14 ಜೂನ್ 2016 (12:49 IST)
ನಮ್ಮ ತಂದೆ ಪ್ರಧಾನಿಯಾದಾಗ ನಾನು ಸಂತೋಷಪಟ್ಟಿರಲಿಲ್ಲ. ಆದ್ರೆ ಸಿದ್ದರಾಮಯ್ಯ ಸಿಎಂ ಆಗಲಿಲ್ಲವೆಂದು  ಕಣ್ಣೀರಿಟ್ಟಿದ್ದೆ ಎಂದು ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಹೇಳಿದ್ದಾರೆ.
 
ಜೆಡಿಎಸ್ ಭಿನ್ನಮತಿಯರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಿನ್ನಮತಿಯರ ಆರೋಪಗಳಿಗೆ ಉತ್ತರಿಸಬೇಕಾದಲ್ಲಿ ಇತಾಹಸ ಕೆದಕಬೇಕಾಗುತ್ತದೆ. ನಾನು ಯಾವತ್ತು ಅಧಿಕಾರಕ್ಕಾಗಿ ಆಸೆ ಪಟ್ಟವನಲ್ಲ. ಇತರರ ಇಲಾಖೆಗಳಲ್ಲಿ ಕೈಯಾಡಿಸಿದ ವ್ಯಕ್ತಿಯಲ್ಲ ಎಂದು ತಿರುಗೇಟು ನೀಡಿದರು.
 
ನಾನು ಸಚಿವನಾಗಿದ್ದಾಗ ಮಾಗಡಿ ಕ್ಷೇತ್ರಕ್ಕೆ ಕೋಟಿ ಕೋಟಿ ಅನುದಾನ ನೀಡಿದ್ದೇನೆ. ನಾನು ಚುನಾವಣೆ ನಿಲ್ಲುವ ಸಂದರ್ಭದಲ್ಲಿ ಅಂಬರೀಶ್ ಮತ್ತು ಸಂದೇಶ ನಾಗರಾಜ್ ಇಬ್ಬರು ಮಾತ್ರ ನನ್ನ ಬೆಂಬಲಿಗೆ ನಿಂತಿದ್ದರು. ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.
 
ನಾನು ಸಚಿವನಾದಾಗ ಸಂಪುಟದಿಂದ ಕಿತ್ತುಹಾಕಲಾಗಿತ್ತು. 20-20 ಸರಕಾರದಲ್ಲಿ ನನ್ನನ್ನು ಮಂತ್ರಿ ಮಾಡಿ ಎಂದು ಯಾರ ಮೇಲೂ ಒತ್ತಡ ಹೇರಲಿಲ್ಲ. ರಾಮಮೂರ್ತಿಯಿಂದ ಹಣ ಪಡೆದಿದ್ದಾರೆ ಎನ್ನುವುದು ಸುಳ್ಳು ಆರೋಪ. ಬೇಕಾದರೆ ಧರ್ಮಸ್ಥಳಕ್ಕೆ ಹೋಗಿ ಪ್ರಮಾಣ ಮಾಡುವೆ. ಅಥವಾ ಚಾಮುಂಡೇಶ್ವರಿ ದೇವಿಯ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ ಎಂದು ಗುಡುಗಿದರು.
 
ನನ್ನ ವಿರುದ್ಧ ಜೆಡಿಎಸ್ ಶಾಸಕ ಬಾಲಕೃಷ್ಣ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಅವರ ಬಗ್ಗೆ ನನಗೆ ವೈಯಕ್ತಿಕವಾಗಿ ಗೌರವವಿದೆ. ಇವರೆಗೆ .ಯಾರನ್ನೂ ನಾನು ವೈಯಕ್ತಿಕವಾಗಿ ಟಾರ್ಗೆಟ್ ಮಾಡಿಲ್ಲ ಎಂದು ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಸ್ಪಷ್ಟಪಡಿಸಿದ್ದಾರೆ.    

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಮಾನಗಳಲ್ಲಿ ಯಾಕೆ ಹೀಗಾಗುತ್ತಿದೆ, ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶವಾಯಿತು ಇಂಡಿಗೋ ವಿಮಾನ

ಯೋಗ ಜಗತ್ತನ್ನು ಒಂದುಗೂಡಿಸುತ್ತದೆ: ಪ್ರಧಾನಿ ನರೇಂದ್ರ ಮೋದಿ

ಸೊಸೆಯನ್ನು ತಾನೇ ಕೊಂದು, ನಾಪತ್ತೆ ನಾಟಕವಾಡಿದ್ದ ಮಾವ ಕೊನೆಗೂ ಅರೆಸ್ಟ್‌

ಇರಾನ್‌ನಿಂದ 290 ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ವಾಪಾಸ್‌, ಮೂರು ಹಂತದಲ್ಲಿ ಕಾರ್ಯಚರಣೆ

ಇಸ್ರೇಲ್‌ನಲ್ಲಿರುವ ಭಾರತೀಯರು ತಾಯ್ನಾಡಿಗೆ ವಾಪಾಸ್ಸಾಗಬೇಕೇ, ಸರ್ಕಾರ ಏನ್ ಹೇಳ್ತಿದೆ

ಮುಂದಿನ ಸುದ್ದಿ
Show comments