Webdunia - Bharat's app for daily news and videos

Install App

ಪ್ರಿಯಾಂಕಾ, ನಿಮ್ಮಲ್ಲಿ ಇಂದಿರಾರನ್ನು ಕಾಣುತ್ತೇವೆ: ರಾಜಸ್ಥಾನದಲ್ಲಿ ಕಾಂಗ್ರೆಸ್ ಪೋಸ್ಟರ್

Webdunia
ಮಂಗಳವಾರ, 14 ಜೂನ್ 2016 (12:46 IST)
ಉತ್ತರ ಪ್ರದೇಶದಲ್ಲಿ ರಾರಾಜಿಸುತ್ತಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪೋಸ್ಟರ್ ಈಗ ರಾಜಸ್ಥಾನದಲ್ಲೂ ಕಾಣಿಸಿಕೊಂಡಿದೆ. 

ಈ ಪೋಸ್ಟರ್‌ನಲ್ಲಿ ಪ್ರಿಯಾಂಕಾ ಅವರನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಹೋಲಿಸಲಾಗಿದೆ. ಇದನ್ನು ಜೈಪುರ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ನವಾಬ್ ಬಕೇಶ್ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
 
ಸೋಮವಾರ ಮುಂಜಾನೆ ಜೈಪುರದ ಪಿಸಿಸಿ ಗೇಟ್ ಬಳಿ ಅಂಟಿಸಿದ್ದ ಇಂದಿರಾ ಮತ್ತು ಪ್ರಿಯಾಂಕಾ ಅವರ ಭಾವಚಿತ್ರಗಳನ್ನು ಒಳಗೊಂಡಿರುವ ಪೊಸ್ಟರ್‌ನಲ್ಲಿ - ನಿಮ್ಮಲ್ಲಿ ಇಂದಿರಾ ಅವರನ್ನು ನೋಡುತ್ತೇವೆ ಎಂದು ಬರೆಯಲಾಗಿದೆ. 
 
ವಿವಾದ ಪ್ರಾರಂಭವಾಗುತ್ತಿದ್ದಂತೆ ಈ ಪೋಸ್ಟರ್‌ನ್ನು ಕಿತ್ತು ಹಾಕಲಾಯಿತು ಎಂದು ವರದಿಯಾಗಿದೆ. 
 
ಪ್ರಿಯಾಂಕಾ ಅವರನ್ನು ರಾಜಕೀಯ ಕಣಕ್ಕೆ ತರುವಂತೆ ಕಳೆದ ತಿಂಗಳು ಸುಮಾರು 600 ಬ್ಲಾಕ್ ಅಧ್ಯಕ್ಷರು ಕಾಂಗ್ರೆಸ್ ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌ ಒತ್ತಾಯಿಸಿದ್ದರು ಎಂದು ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿತ್ತು. ಪ್ರಿಯಾಂಕಾರವರನ್ನು ರಾಜಕೀಯದ ಮುಖ್ಯವಾಹಿನಿಗೆ ತಂದು ಉತ್ತರ ಪ್ರದೇಶ ಚುನಾವಣೆಯನ್ನು ಅವರ ಸಾರಥ್ಯದಲ್ಲಿ ನಡೆಸುವುದು ರಾಜ್ಯದಲ್ಲಿ ಕಳೆದುಕೊಂಡಿರುವ ಅಧಿಕಾರವನ್ನು ಮರಳಿ ಗಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದು ಎಂದು ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದನ್ನು ಪುಷ್ಠೀಕರಿಸುವ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka weather: ಕರಾವಳಿ, ಮಲೆನಾಡಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ, ಯೆಲ್ಲೋ ಅಲರ್ಟ್‌

ಇರಾನ್‌ ಮೇಲೆ ಅಮೆರಿಕಾ ಏರ್‌ಸ್ಟ್ರೇಕ್: ಮತ್ತಷ್ಟು ದಾಳಿಯ ಎಚ್ಚರಿಕೆ ನೀಡಿದ ಡೋನಾಲ್ಡ್‌ ಟ್ರಂಪ್‌

ಇರಾನ್‌–ಇಸ್ರೇಲ್‌ ನಡುವಿನ ಸಂಘರ್ಷಕ್ಕೆ ದೊಡ್ಡಣ್ಣ ಎಂಟ್ರಿ: ಇರಾನ್ ಅಣುಸ್ಥಾವರಗಳ ಮೇಲೆ ಅಮೆರಿಕಾ ಏರ್‌ ಸ್ಟ್ರೈಕ್‌

ವಿಮಾನಗಳಲ್ಲಿ ಯಾಕೆ ಹೀಗಾಗುತ್ತಿದೆ, ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶವಾಯಿತು ಇಂಡಿಗೋ ವಿಮಾನ

ಯೋಗ ಜಗತ್ತನ್ನು ಒಂದುಗೂಡಿಸುತ್ತದೆ: ಪ್ರಧಾನಿ ನರೇಂದ್ರ ಮೋದಿ

ಮುಂದಿನ ಸುದ್ದಿ
Show comments