ವಿಧಾನಸೌಧದಲ್ಲಿ ಜಪ್ತಿಯಾಗಿದ್ದ 1.97 ಕೋಟಿ ರೂಪಾಯಿ ಹಣದ ಕುರಿತು ಬಿಎಸ್‌ವೈಗಿಂತ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರಿಗೆ ಹೆಚ್ಚು ಮಾಹಿತಿ ಇದ್ದಂತಿದೆ ಎಂದು ಶಾಸಕ ಸಿ.ಟಿ.ರವಿ ಟಾಂಗ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಿಷಯವನ್ನು ಪ್ರಸ್ತಾಪಿಸುತ್ತಾರೆ ಅಷ್ಟೆ. ಆದರೆ, ಅದನ್ನು ಸಾಬೀತು ಪಡಿಸುವುದಿಲ್ಲ. ಅವರದ್ದು ಹಿಟ್ ಆಂಡ್ ರನ್ ಗುಣ ಎಂದು ಕಿಡಿಕಾರಿದರು.
ವಿಧಾನಸೌಧದಲ್ಲಿ ಜಪ್ತಿಯಾಗಿರುವ ಹಣದ ಕುರಿತು ಬಿಎಸ್‌ವೈ ಅವರಿಗೆ ಸಂಪೂರ್ಣ ಮಾಹಿತಿ ಇದೆ ಎಂದು ಎಚ್‌ಡಿಕೆ ಬಾಂಬ್ ಸಿಡಿಸಿದ್ದಾರೆ. ಆದರೆ, ಆ ಅಕ್ರಮ ಹಣದ ಕುರಿತು ಎಚ್‌ಡಿಕೆ ಅವರಿಗೆ ಹೆಚ್ಚು ಮಾಹಿತಿ ಇದ್ದಂತಿದೆ. ಹೀಗಾಗಿ ಅವರು ಬೇರೊಬ್ಬರನ್ನು ದೂರುತಿದ್ದಾರೆ ಎಂದು ತಿರುಗೇಟು ನೀಡಿದರು.
ವಿಧಾನಸೌಧದಲ್ಲಿ ಜಪ್ತಿಯಾಗಿದ್ದ ಹಣ ಯಾರಿಗೆ ಸೇರಿದೆ ಎನ್ನುವುದು ಬಿಎಸ್‌ವೈಗೆ ಸಂಪೂರ್ಣ ಮಾಹಿತಿ ಇದೆ. ಅವರನ್ನು ವಿಚಾರಿಸಿದರೆ ಹಣ ಯಾರಿಗೆ ಸೇರಿದ್ದು ಹಾಗೂ ಹಣ ಏಲ್ಲಿಗೆ ರವಾನೆಯಾಗುತ್ತಿತ್ತು ಎನ್ನುವುದು ತಿಳಿದು ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ