ಮುಸ್ಲಿಮರ ನಮಾಜ್ ಸಮರ್ಥಿಸಲು ಹೋಗಿ ಹಿಂದೂಗಳು ಬಾರ್ ನಲ್ಲಿರ್ತಾರೆ ಎಂದ ಕೈ ನಾಯಕ ಆಂಜನೇಯ

Krishnaveni K
ಸೋಮವಾರ, 10 ನವೆಂಬರ್ 2025 (15:32 IST)
Photo Credit: Instagram
ಬೆಂಗಳೂರು: ಮುಸ್ಲಿಮರು ನಮಾಜ್ ಮಾಡಿದ್ದನ್ನು ಸಮರ್ಥಿಸಲು ಹೋಗಿ ಹಿಂದೂಗಳು ಹಬ್ಬದ ದಿನದಂದು ಬಾರ್ ನಲ್ಲಿರುತ್ತಾರೆ ಎಂದು ಕೈ ನಾಯಕ ಆಂಜನೇಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಮುಸ್ಲಿಮರು ನಮಾಜ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಸಾರ್ವಜನಿಕರು ಮತ್ತು ಬಿಜೆಪಿ ತೀವ್ರ ಟೀಕೆ ನಡೆಸಿತ್ತು.

ಇದಕ್ಕೆ ಪ್ರತಿಕ್ರಿಯಿಸುವಾಗ ಮಾಜಿ ಸಚಿವ ಎಚ್ ಆಂಜನೇಯ ನಾಲಿಗೆ ಹರಿಬಿಟ್ಟಿದ್ದಾರೆ. ‘ಮುಸ್ಲಿಮರು ಮಾಡಿದ್ದು ಪ್ರಾರ್ಥನೆ. ಕೋಲು ಹಿಡಿದುಕೊಂಡು ಹೋಗೋದಲ್ಲ.ಅವರಲ್ಲಿರೋ ಶ್ರದ್ಧೆಯನ್ನು ನೋಡಿ ಕಲಿತುಕೊಳ್ಳಿ. ಇವರಂಗೆ ನಾಮ ಹಾಕಿಕೊಂಡು ಪೂಜೆ ಮಾಡಿ ತಟ್ಟೆಗೆ ಹಾಕಯ್ಯ ಎಂದಿಲ್ಲ. ಅವರು ಮೂರ್ಖರಲ್ಲ. ಮಸೀದಿ ಇಲ್ಲ ಅಂತೇಳಿ ಇಲ್ಲಿ ನಮಾಜ್ ಮಾಡಿರಬಹುದು. ಅದರಲ್ಲೂ ನಾವು ಸಣ್ಣತನ ತೋರಿಸಿದ್ರೆ ಹೇಗೆ? ಗಣೇಶನ ಹಬ್ಬದ ಸಂದರ್ಭದಲ್ಲಿ ಬ್ರ್ಯಾಂಡಿ ಅಂಗಡಿಗಳಲ್ಲಿ ಫುಲ್ ರಶ್ ಇರುತ್ತದೆ. ಹಬ್ಬದ ಸಂದರ್ಭದಲ್ಲಿ ಹೂ, ಹಣ್ಣಿಗಿಂತ ಬಾರ್, ರೆಸ್ಟೋರೆಂಟ್ ಫುಲ್ ರಶ್ ಆಗಿರುತ್ತದೆ’ ಎಂದು ಆಂಜನೇಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೋಹನ್ ಭಾಗವತ್ ಅಂದರೆ ಪೂಜ್ಯನಿಯ ಭಾವನೆಯಿತ್ತು: ಪ್ರದೀಪ್ ಈಶ್ವರ್‌

ಸಿಎಂ, ಗೃಹ ಸಚಿವರ ರಾಜೀನಾಮೆಗೆ ವಿಜಯೇಂದ್ರ ಆಗ್ರಹ

ಕರ್ನಾಟಕದಲ್ಲಿ ಕ್ರಿಮಿನಲ್‍ಗಳು, ಭಯೋತ್ಪಾದಕರಿಗೆ ರಾಜಾಶ್ರಯ: ಸಿ.ಟಿ.ರವಿ ಆಕ್ಷೇಪ

ಕಾಂಗ್ರೆಸ್ ಸರ್ಕಾರದಲ್ಲಿ ಉಗ್ರರಿಗೆ, ಖೈದಿಗಳಿಗೆ ಜೈಲಿನಲ್ಲಿ ರಾಜಾತಿಥ್ಯ: ಬಿಜೆಪಿ ಆರೋಪ

ಏರ್‌ಪೋರ್ಟ್‌ನಲ್ಲಿ ನಮಾಜ್: ಈ ವಿಚಾರದಲ್ಲಿ ಸಣ್ಣತನವನ್ನು ತೋರಿಸಬಾರದು

ಮುಂದಿನ ಸುದ್ದಿ
Show comments