Daily Horoscope

ಜಿಮ್ ತರಬೇತುದಾರನಿಂದ ಮಹಿಳಾ ಟೆಕ್ಕಿಯ ಕೊಲೆ; ಕೊಲೆಗೆ ಕಾರಣವೇನು ಗೊತ್ತಾ?

Webdunia
ಗುರುವಾರ, 30 ಆಗಸ್ಟ್ 2018 (11:40 IST)
ಬೆಂಗಳೂರು: ದೆಹಲಿ ಮೂಲದ ಮಹಿಳಾ ಟೆಕ್ಕಿ  ವಿಜಯಲಕ್ಷ್ಮಿ (23) ಅವರನ್ನು ಕೊಲೆ ಮಾಡಿ ಪರಾರಿ ಆಗಿದ್ದ ಹರೀಶ್‌ ಅನ್ನು  ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದಾರೆ.


ದೆಹಲಿ ಮೂಲದವರೇ ಆಗಿದ್ದ ವಿಜಯಲಕ್ಷ್ಮಿ ಮೂರು ತಿಂಗಳ ಹಿಂದೆ ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಸಾಫ್ಟ್‌ವೇರ್‌ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು.ದೆಹಲಿಯಲ್ಲೆ  ಪರಿಚಯವಾಗಿದ್ದ ಗೆಳೆಯ ಹರೀಶ್‌ಕುಮಾರ್‌ ಆ. 15 ರಂದು ಗೆಳತಿಯನ್ನು ಮಾತಾಡಿಸುವ ನೆಪದಲ್ಲಿ ಬೆಂಗಳೂರಿಗೆ ಬಂದು ಕೊಲೆ ಮಾಡಿ ಪರಾರಿ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.


ವಿಜಯಲಕ್ಷ್ಮಿ ದೆಹಲಿಯಲ್ಲಿದ್ದಾಗಲೇ  ಜಿಮ್‌ ತರಬೇತುದಾರನಾಗಿದ್ದ ಹರೀಶ್‌ನ ಪರಿಚಯ ಆಗಿತ್ತು. ಅವರಿಬ್ಬರ ಪರಿಚಯ ಸ್ನೇಹಕ್ಕೆ ತಿರುಗಿತ್ತು. ಹರೀಶ್ ಆ ಸ್ನೇಹವನ್ನು ಪ್ರೀತಿ ಎಂದು ನಂಬಿಕೊಂಡಿದ್ದ. ಹೀಗಾಗಿ ಮದುವೆಯಾಗು ಎಂದು ಆಕೆಯನ್ನು ಪೀಡಿಸುತ್ತಿದ್ದ. ವಿಜಯಲಕ್ಷ್ಮಿ ದೆಹಲಿಯಿಂದ ಬೆಂಗಳೂರಿಗೆ ವರ್ಗವಾಗಿದ್ದು ಹರೀಶ್‌ಗೆ ಇಷ್ಟ ಇರಲಿಲ್ಲ. ತನ್ನನ್ನು ವಿಜಯಲಕ್ಷ್ಮಿ ನಿರ್ಲಕ್ಷಿಸುತ್ತಿದ್ದಾರೆ ಎಂದು ಸಿಟ್ಟುಗೊಂಡಿದ್ದ. ಅದು ಅಲ್ಲದೇ ವಿಜಯಲಕ್ಷ್ಮಿಯಿಂದ ಅಗತ್ಯಬಿದ್ದಾಗಲೆಲ್ಲಾ ಸಾಕಷ್ಟು ಹಣ ಪೀಕುತ್ತಿದ್ದ ಹರೀಶ್‌ಗೆ ಈ ಹಣದ ಮೂಲ ಕೂಡ ನಿಂತು ಹೋಗುತ್ತದೆ ಎನ್ನುವ ಭಯ ಕಾಡತೊಡಗಿತ್ತು. ಇದೇ ಕಾರಣಕ್ಕೆ ಕೊಲೆ ಮಾಡಿರುವ ಸಾಧ್ಯತೆಗಳಿವೆ ಎಂದು ವೈಟ್‌ಫೀಲ್ಡ್‌ ಪೊಲೀಸರು ತಿಳಿಸಿದ್ದಾರೆ.

 
ಆ.16 ರಂದು ಬೆಂಗಳೂರಿನ ನಾಗೊಂಡನಹಳ್ಳಿಯ ಬಾಡಿಗೆ ಮನೆಯಲ್ಲಿ ಕೊಲೆ ಮಾಡಿ ಆರೋಪಿ ದಿಲ್ಲಿಯಲ್ಲಿ ತಲೆಮರೆಸಿಕೊಂಡಿದ್ದ. ಆ. 15 ರಂದು ಗೆಳತಿಯನ್ನು ಮಾತಾಡಿಸುವ ನೆಪದಲ್ಲಿ ಬೆಂಗಳೂರಿಗೆ ಬಂದು ಕೊಲೆ ಮಾಡಿ ಪರಾರಿ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments