Publish Date: Sat, 05 Aug 2017 (12:37 IST)
Updated Date: Sat, 05 Aug 2017 (12:42 IST)
ನಮ್ಮನ್ನ ಯಾರೂ ರೆಸಾರ್ಟ್`ನಲ್ಲಿ ಕೂಡಿ ಹಾಕಿಲ್ಲ,ಸ್ವ ಇಚ್ಛೆಯಿಂದಲೆ ಇಲ್ಲಿಗೆ ಬಂದಿದ್ದೇವೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ಭೇಟಿ ಬಳಿಕ ಗುಜರಾತ್`ನ ಕಾಂಗ್ರೆಸ್ ಶಾಸಕರು ಹೇಳಿದ್ದಾರೆ.
ನಮಗೆ 15 ಕೋಟಿ ಕೊಡಲು ಬಂದಾಗ ಅದನ್ನ ನಿರಾಕರಿಸಿ ಇಲ್ಲಿಗೆ ಬಂದಿದ್ದೇವೆ.ತಲಾ 15 ಕೋಟಿ ಕೊಟ್ಟು ಖರೀದಿಸಲು ಬಂದಿದ್ದರು. ಬಿಜೆಪಿಯ ನಿಡಿದ ಲಂಚದ ಆಮಿಷ ಬಹಿರಂಗಪಡಿಸುತ್ತೇವೆ ಎಂದು ಶಾಸಕರು ಆರೋಪಿಸಿದ್ದಾರೆ. ಎಸ್`ಪಿಜಿ ಭದ್ರತೆ ಇದ್ದರೂ ನಮ್ಮ ನಾಯಕರ ಮೇಲೆ ಗುಜರಾತ್`ನಲ್ಲಿ ದಾಳಿ ನಡೆದಿದೆ. ಇನ್ನೂ ನಮ್ಮ ಗತಿಯೇನು ಎಂದು ನೀವೇ ಅರ್ಥ ಮಾಡಿಕೊಳ್ಳಿ ಎಂದು ಶಾಸಕರು ಹೇಳಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ನಮ್ಮ ಜೊತೆಗಿದೆ. ಗುಜರಾತ್`ನ ಎಲ್ಲ ಶಾಸಕರು ಒಟ್ಟಾಗಿದ್ದೇವೆ. ನಾವು ವಾಪಸ್ ತೆರಳಲು ಇಚ್ಛಿಸಿದ್ದೇವೆಂದು ಬಿಜೆಪಿ ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ಬಿಜೆಪಿ ಡರ್ಟಿ ಪಾಲಿಟಿಕ್ಸ್ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ರಾಜ್ಯಪಾಲರ ಜೊತೆ ಸೌಹಾರ್ದಯುತ ಭೇಟಿಯಷ್ಟೇ ಎಂದು ಶಾಸಕರು ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ