2 ತಿಂಗಳ ಕಾಲ ಬಂದ್ ಆಗಲಿರುವ ಗೂಡ್ಸ್ ಶೆಡ್ ರೋಡ್

Webdunia
ಭಾನುವಾರ, 24 ಏಪ್ರಿಲ್ 2022 (19:26 IST)
ಸಿಲಿಕಾನ್ ಸಿಟಿ  ಜನರು ನಿತ್ಯ ಸಂಭವಿಸುವ ಟ್ರಾಫಿಕ್ ಜಾಮ್ ನಂತಹ ಸಮಸ್ಯೆಗೆ ಬೇಸೆತ್ತು ಹೋಗಿದ್ದಾರೆ. ಯಾವುದೇ ರಸ್ತೆ ನೋಡಿದ್ರು ಟ್ರಾಫಿಕ್ ನಿಂದ ಕೂಡಿರುತ್ತೆ. ಆದ್ರೆ  ಹೃದಯಭಾಗದ ಗೂಡ್ಸ್ ಶೆಡ್ ರೋಡ್ ನ್ನ ಸ್ಥಿತಿ ಸಂಪೂರ್ಣವಾಗಿ ಆಧ್ವಾನವಾಗೋಗಿದೆ. ಕಿರಿದಾದ ರಸ್ತೆಯಿಂದ ಒಂದು ಕಡೆ ಸಮಸ್ಯೆಯಾದ್ರೆ , ಮತ್ತೊಂದು ಕಡೆ ರಸ್ತೆಯ ಕಾಮಗಾರಿ ಮಾಡುವುದಕ್ಕಾಗಿ ರಸ್ತೆ ಬಂದ್ ಮಾಡಿ ಇನ್ನಿಲ್ಲದ ಸಮಸ್ಯೆಯಾಗುವಂತೆ ಮಾಡಿದ್ದಾರೆ. ಈ ಒಂದು ರಸ್ತೆಯಿಂದ ಸುತ್ತ ಟ್ರಾಫಿಕ್ ಜಾಮ್ ಸಮಸ್ಯೆ ಉಲ್ಬಣಿಸಿದೆ.ಇನ್ನೂ ಈ ಒಂದು ರಸ್ತೆಯಿಂದ ನಿತ್ಯ ಮೈಸೂರು ರಸ್ತೆಯಿಂದ ಮೆಜಸ್ಟಿಕ್ ಗೆ ಸಂಪರ್ಕ ಕಲ್ಪಿಸುವ ರಸ್ತೆಯಿಂದ ಸುತ್ತ- ಮುತ್ತ ಟ್ರಾಫಿಕ್ ಜಾಮ್ ಸಂಭವಿಸುತ್ತದೆ, ಇನ್ನೂ ಈ ಕಿರಿದಾದ ಗೂಡ್ಸ್ ಶೆಡ್ ರೋಡ್ ನಲ್ಲಿ ಈಗ ಬೇರೆ ಟೂವೀಲರ್ ಮಾತ್ರ ಓಡಾಡಲು ಸಾಧ್ಯ. ಅದು ಬಿಟ್ರೆ ದೊಡ್ಡ ವಾಹನಗಳು ಈ ರಸ್ತೆಯಲ್ಲಿ ಓಡಾಡಲು ಆಗುವುದಿಲ್ಲ. ಈ ಒಂದು ರಸ್ತೆಯಿಂದ ಬಿನ್ನಿಮೀಲ್, ಮೆಜಸ್ಟಿಕ್ , ಮೈಸೂರು ರೋಡ್ ಸೇರಿದಂತೆ ನಗರದ ಹಲವಡೆ ಟ್ರಾಫಿಕ್ ಜಾಮ್ ನಂತಹ  ಸಮಸ್ಯೆ ಸಂಂಭವಿಸುತ್ತದೆ. ಇನ್ನೂ ಈ ರಸ್ತೆ ಈಗಾಗಲ್ಲೇ ಕ್ಲೋಸ್ ಆಗಿ 2 ತಿಂಗಳಾಗ್ತಿದೆ. ಆದ್ರೆ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುವ ಕೆಲಸವು ಆಗ್ತಿಲ್ಲ, ಕಾಮಗಾರಿ ಕೆಲಸವು ಮಾಗ್ತಿಲ್ಲ..ಇನ್ನೂ ಇಂಜಿನಿಯರ್ ಹೆಸರಿಗೆ ಮಾತ್ರ ಇದ್ದಾರೆ. ಇಂಜಿನಿಯರ್ ಇದ್ರೂ ಯಾವುದೇ ಉಪಯೋಗ ಇಲ್ಲದಂತೆಯಾಗಿದೆ. ಈ ಒಂದು ರಸ್ತೆಯಿಂದ ಸುತ್ತ- ಮತ್ತು ಗಲ್ಲಿಗಳಲ್ಲೂ ಟ್ರಾಫಿಕ್ ಸಮಸ್ಯೆ ಉಂಟಾಗ್ತಿದೆ . ಆದ್ರೂ ಅಧಿಕಾರಿಗಳು ಇತ್ತಾ ಗಮನಹಾರಿಸುತ್ತಿಲ್ಲ. ಹೀಗಾಗಿ ಜನರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ, ಇನ್ನಾದ್ರು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೇತ್ತುಕೊಂಡು ಕ್ರಮಕೈಗೋಳ್ತಾರಾ? ಎಂಬುದನ್ನ ಕಾದು ನೋಡಬೇಕಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕ್ಯಾಬಿನ್ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ, ಪೈಲಟ್ ವಿರುದ್ಧ ಪ್ರಕರಣ ದಾಖಲು

ದಕ್ಷಿಣ ಕನ್ನಡ ಜಿಲ್ಲೆಗೆ ಶೀಘ್ರದಲ್ಲೇ ಆನೆ ಕಾರ್ಯಪಡೆ

ಕೇರಳದ ಈ ಜಿಲ್ಲೆಗಳಲ್ಲಿ ಮುಂದಿನ 5 ದಿನಗಳಲ್ಲಿ ಭಾರೀ ಮಳೆ

ಧರ್ಮಸ್ಥಳ ಬುರುಡೆ ಪ್ರಕರಣ ಪ್ರಮುಖ ಹಂತದಲ್ಲಿರುವಾಗ ಮಹತ್ವದ ಬೆಳವಣಿಗೆ

ದೇವರಿಗೆ ಬಿಟ್ಟಿದ್ದ ಗೋವಿನ ಕಾಲು ಕಡಿದ ಪಾಪಿಗಳು, ಕ್ರಮಕ್ಕೆ ಒತ್ತಾಯ

ಮುಂದಿನ ಸುದ್ದಿ
Show comments