Webdunia - Bharat's app for daily news and videos

Install App

ಕೆಸಿಆರ್ ಕೋಟೆಯಲ್ಲಿ `ಕೈ’ ನಡೆಸಲಿದ್ಯಾ ಗ್ಯಾರಂಟಿ ದರ್ಬಾರ್...?

Webdunia
ಮಂಗಳವಾರ, 14 ನವೆಂಬರ್ 2023 (21:00 IST)
ಯೆಸ್.. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲು ಕಾರಣವಾಗಿದ್ದೇ, ಆ ಐದು ಗ್ಯಾರಂಟಿ ಯೋಜನೆಗಳು. ನಿಜ.. ಕಾಂಗ್ರೆಸ್ ಕೊಟ್ಟ ಆ ಐದು ಗ್ಯಾರಂಟಿ ಯೋಜನೆಗಳ ಭರವಸೆಯಿಂದ ೧೩೫ ಸೀಟ್‌ಗಳ ಪ್ರಚಂಡ ದಿಗ್ವಿಜಯವನ್ನು ಬಾರಿಸಿತ್ತು ಕಾಂಗ್ರೆಸ್. 
 
ಕಾಂಗ್ರೆಸ್ ಸದ್ಯ ಕರ್ನಾಟಕದಲ್ಲಿ ಆಡಳಿತವನ್ನು ನಡೆಸುತ್ತಿದೆ. ಕೊಟ್ಟ ಐದು ಗ್ಯಾರಂಟಿಗಳಲ್ಲಿ ಈಗಾಗಲೇ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಆದ್ದರಿಂದ ಕಾಂಗ್ರೆಸ್ ಇದೀಗ ಪಂಚರಾಜ್ಯಗಳ ಚುನಾವಣಾ ಅಖಾಡದಲ್ಲೂ ಹೆಚ್ಚು ಕಮ್ಮೀ ಇದೇ ಗ್ಯಾರಂಟಿ ಅಸ್ತçಗಳನ್ನೇ ಬಳಕೆ ಮಾಡಿಕೊಂಡು ಅಖಾಡಕ್ಕೆ ಇಳಿದಿದೆ. ಈಗಾಗಲೇ ಮೀಜೋರಾಂ ಮತ್ತು ಛತ್ತಿಸ್‌ಘಡದಲ್ಲಿ ಚುನಾವಣೆ ಮುಗಿದಿದೆ. ಇನ್ನೂಳಿದ ರಾಜ್ಯಗಳಲ್ಲಿ ಚುನಾವಣಾ ಕಣ ರಂಗರ‍್ತಾ ಇದೆ..
 
ಇದೇ ೧೭ಕ್ಕೆ ಮಧ್ಯಪ್ರದೇಶದಲ್ಲಿ ಚುನಾವಣೆ ಎದುರಾಗ್ತಾ ಇದೆ. ಇಲ್ಲಿಯೂ ಕೂಡ ಗ್ಯಾರಂಟಿ ದರ್ಬಾರ್ ಮೂಲಕವೇ ಅಧಿಕಾರವನ್ನು ಪಡೆಯಲು ಕಾಂಗ್ರೆಸ್ ಯತ್ನಿಸುತ್ತಿದೆ.. ಹಾಗೇ ಈ ಕಡೆ ೧೧೯ ಕ್ಷೇತ್ರಗಳನ್ನು ಒಳಗೊಂಡ ತೆಲಂಗಾಣದಲ್ಲೂ ಚುನಾವಣಾ ಅಖಾಡ ರಂಗೇರುತ್ತಿದೆ. ಅದರಲ್ಲೂ ಕಾಂಗ್ರೆಸ್ ಘೋಷಿಸಿರುವ ಆರು ಗ್ಯಾರಂಟಿ ಯೋಜನೆಗಳು, ಕೆಸಿಆರ್ ಕೋಟೆಯಲ್ಲಿ ಕೈ ಹೊಸ ಸಂಚಲನವನ್ನು ಸೃಷ್ಟಿಸುವ ಎಲ್ಲಾ ಲೆಕ್ಕಾಚಾರಗಳು ಗರಿಗೆದರಿಕೊಂಡಿವೆ..
 
ಇಡೀ ದೇಶಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳೆ ಮಾದರಿ ಆಗಿ ಬಿಟ್ಟಿವೆ. ಕಾಂಗ್ರೆಸ್ ನುಡಿದಂತೆ ಕರುನಾಡಿನಲ್ಲಿ ನಡೆದುಕೊಂಡಿದೆ. ಐದರಲ್ಲಿ ನಾಲ್ಕು ಗ್ಯಾರಂಟಿಗಳು ಪ್ರಸ್ತುತ ಚಾಲನೆಯಲ್ಲಿವೆ. ಹಾಗಾಗಿ ಸಹಜವಾಗಿಯೇ ಕಾಂಗ್ರೆಸ್ ಮೇಲೆ ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿಶ್ವಾಸ ಹೆಚ್ಚಿದೆ.
 
ತೆಲಂಗಾಣದಲ್ಲಿಯೂ ಕೂಡ ಕರ್ನಾಟಕದಂತೆಯೇ ಪ್ರಮುಖ ಆರು ಗ್ಯಾರಂಟಿ ಯೋಜನೆಗಳ ಘೋಷಣೆ ಮಾಡಿದೆ ಕಾಂಗ್ರೆಸ್. ಚುನಾವಣಾ ಪ್ರಚಾರದಲ್ಲಿ ಹೋಗಿ ಬಂದ ಕಡೆಯೆಲ್ಲಾ ಬರೀ ಗ್ಯಾರಂಟಿ ದರ್ಬಾರ್‌ನ ಸೌಂಡ್ ಕೇಳಿಸುತ್ತಿದೆ. ಅದರಲ್ಲೂ ಕರ್ನಾಟಕದ ರಾಜ್ಯ ನಾಯಕರ ದಂಡೇ ತೆಲಂಗಾಣದ ಚುನಾವಣಾ ಅಖಾಡಕ್ಕೆ ಇಳಿದು, ಸದ್ದು ಮಾಡಿದ್ದಾಗಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಸೃಷ್ಟಿಸಿದ್ದು ದೊಡ್ಡ ಚರಿತ್ರೆಯನ್ನಲ್ಲದೇ, ಬೇರೆ ಏನು ಅಲ್ಲ. ಹೌದು... ೧೩೫ ಸೀಟ್ ಗೆದ್ದು ಪ್ರಚಂಡ ದಿಗ್ವಿಜಯವನ್ನು ಸಾಧಿಸೋದು ಯಾವುದೇ ಪಕ್ಷಕ್ಕಾಗಲಿ ಅದು ತಮಾಷೆಯ ಮ್ಯಾಟರ್ ಅಲ್ಲ. ಅದರಲ್ಲೂ ಮೋದಿಯಂತಹ ಮೋದಿಯೇ ಬಂದು, ರ‍್ಯಾಲಿಗಳನ್ನು ನಡೆಸಿದರೂ, ಬಿಜೆಪಿಯೂ ೬೬ನ್ನು ದಾಟಲಿಲ್ಲ. ಅದಕ್ಕೆ ಕಾರಣ, ಕೈ ಕೊಟ್ಟ ಆ ಐದು ಗ್ಯಾರಂಟಿ ಪವರ್..?
 
ಯೆಸ್.. ಇದೀವಾಗ ಥೇಟ್ ಕರ್ನಾಟಕದ ಮಾದರಿಯಲ್ಲೇ ತೆಲಂಗಾಣದ ಅಸೆಂಬ್ಲಿ ಚುನಾವಣೆಯನ್ನು ಗೆಲ್ಲಲು ಕಾಂಗ್ರೆಸ್ ಹೈಕಮಾಂಡ್ ಪ್ಲಾನ್ ಮಾಡಿ ಅಖಾಡಕ್ಕೆ ಇಳಿದಾಗಿದೆ. ಅದಕ್ಕೆ ಕರುನಾಡಿನಲ್ಲೇ ಪ್ರಯೋಗಿಸಿದ ಗ್ಯಾರಂಟಿ ಅಸ್ತçಗಳನ್ನೇ ಪ್ರಯೋಗ ಮಾಡ್ತಿದೆ ತೆಲಂಗಾಣದ ರಣಕಣದಲ್ಲಿ. ಇದರ ಜೊತೆಗೆ ಸ್ಟಾಟರ್ಜಿ ರೂಪಿಸಲು ಕರ್ನಾಟಕದ ಕಾಂಗ್ರೆಸ್ ನಾಯಕರನ್ನೇ ತೆಲಂಗಾಣದ ಚುನಾವಣಾ ಅಖಾಡಕ್ಕೆ ಇಳಿಸಿದೆ ಕಾಂಗ್ರೆಸ್‌ನ ಹೈಕಮಾಂಡ್...? ಹಾಗಾದರೇ ಕರ್ನಾಟದಂತೆಯೇ ಇಲ್ಲಿಯೂ, ಕೈ ಪಾರುಪತ್ಯ ಮುಂದುವರೆಯಬಹುದಾ..?
 
ಇವತ್ತು ಕಾಂಗ್ರೆಸ್‌ಗೆ ದೇಶದಲ್ಲಿ ದೊಡ್ಡ ಆತ್ಮವಿಶ್ವಾಸ ಮತ್ತು ಶಕ್ತಿಯನ್ನು ತಂದುಕೊಟ್ಟಿರೋದು, ಕರ್ನಾಟಕದಲ್ಲಿ ಕಾಂಗ್ರೆಸ್ ಮಾಡಿದ ಗ್ಯಾರಂಟಿ ಮೋಡಿ... ಬಹುಶಃ ಇದೇ ಕಾರಣಕ್ಕೆ ಕಾಂಗ್ರೆಸ್‌ನ ಹೈಕಮಾಂಡ್‌ಗೆ, ಪಕ್ಕದ ತೆಲಂಗಾಣವನ್ನು ಗೆಲ್ಲೋದಕ್ಕೆ ಹೊಸ ಸ್ಟಾಟರ್ಜಿ ನಮ್ಮದೇ ಕರ್ನಾಟಕದಿಂದ ಸಿಕ್ಕಂತೆ ಕಾಣ್ತಿದೆ.. ಇದಕ್ಕಾಗಿ ಹಲವು ಗ್ಯಾರಂಟಿ ಆಶ್ವಾಸನೆಗಳನ್ನು ಕೊಡಲಾಗಿದೆ. ಹಾಗೇ ಮಧ್ಯಪ್ರದೇಶ ಚುನಾವಣೆಯೂ ಕೂಡ ಭಿನ್ನವಾಗಿ ಏನಿಲ್ಲ, ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷಗಳು ಕೂಡ, ಉಚಿತ ಖಚಿತ ಅನ್ನುವ ಪಾರ್ಮುಲವನ್ನು ಪ್ರಯೋಗ ಮಾಡಿವೆ..

ಇನ್ನೂ ತೆಲಂಗಾಣದಲ್ಲಿ ಕೆಸಿಆರ್ ಕೂಡ, ಕಾಂಗ್ರೆಸ್‌ನ ಘೋಷಣೆಗಳಿಗೆ ಬೆಚ್ಚಿ ಬಿದ್ದು, ನಂದೂ ಇರಲೀ ಅಂತ ಉಚಿತ ಕಡೆಗೆ ನೋಟ ಬೀರಿದ್ದಾರೆ.. ಬಟ್ ತೆಲಂಗಾಣದ ಮತದಾರನ ಒಲವು, ಯಾವ ಕಡೆಗೋ..?

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments