Select Your Language

Notifications

webdunia
webdunia
webdunia
webdunia

ಗ್ರಾ.ಪಂ.ಉಪ ಚುನಾವಣೆ; ವೇಳಾ ಪಟ್ಟಿ ಪ್ರಕಟ

ಗ್ರಾ.ಪಂ.ಉಪ ಚುನಾವಣೆ; ವೇಳಾ ಪಟ್ಟಿ ಪ್ರಕಟ
bangalore , ಮಂಗಳವಾರ, 14 ಡಿಸೆಂಬರ್ 2021 (20:57 IST)
ಹಲವು ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ/ ತೆರವಾಗಿರುವ ಸ್ಥಾನಗಳಿಗೆ ಉಪ ಚುನಾವಣೆ ನಡೆಸುವ ಸಂಬಂಧ ರಾಜ್ಯ ಚುನಾವಣಾ ಆಯೋಗವು ಚುನಾವಣಾ ವೇಳಾ ಪಟ್ಟಿಯನ್ನು ಪ್ರಕಟಿಸಿದೆ.
      ಡಿಸೆಂಬರ್, 13 ರಂದು ಜಿಲ್ಲಾಧಿಕಾರಿ ಅವರು ಅಧಿಸೂಚನೆ ಹೊರಡಿಸಿದ್ದು, ಡಿಸೆಂಬರ್, 17 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಡಿಸೆಂಬರ್, 18 ರಂದು ನಾಮಪತ್ರ ಪರಿಶೀಲಿಸುವ ದಿನವಾಗಿದೆ. ಡಿಸೆಂಬರ್, 20 ರಂದು ಉಮೇದುವಾರಿಕೆ  ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಡಿಸೆಂಬರ್, 27 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನದ ಅವಶ್ಯವಿದ್ದರೆ ಮತದಾನ ನಡೆಯಲಿದೆ. ಡಿಸೆಂಬರ್, 29 ರಂದು ಮರು ಮತದಾನ ಅವಶ್ಯವಿದ್ದರೆ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಡಿಸೆಂಬರ್, 30 ರಂದು ಮತ ಎಣಿಕೆಯು ಬೆಳಗ್ಗೆ 8 ಗಂಟೆಯಿಂದ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಲಿದೆ. 
       ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ, ಕ್ಷೇತ್ರ, ಸ್ಥಾನ ಮತ್ತು ಮೀಸಲಾತಿ ವಿವರಗಳು: ಮಡಿಕೇರಿ ತಾಲ್ಲೂಕಿನ ಎಮ್ಮೆಮಾಡು ಗ್ರಾ.ಪಂ.ಯ ಎಮ್ಮೆಮಾಡು-1(1 ಸ್ಥಾನ) ಪ.ಪಂ.(ಮ), ಎಮ್ಮೆಮಾಡು-2(1 ಸ್ಥಾನ) ಪ.ಜಾ(ಮ), ಚೆಂಬು ಗ್ರಾ.ಪಂ.ಯ ಚೆಂಬು-3(1 ಸ್ಥಾನ) ಪ.ಜಾ(ಮ), 
       ಸೋಮವಾರಪೇಟೆ ತಾಲ್ಲೂಕಿನ ತೋಳೂರು ಶೆಟ್ಟಿಹಳ್ಳಿ ಗ್ರಾ.ಪಂ. ಕೂತಿ(2ಸ್ಥಾನ) ಹಿ.ವರ್ಗ.ಅ ಮತ್ತು ಸಾಮಾನ್ಯ(ಮ), ವಿರಾಜಪೇಟೆ ತಾಲ್ಲೂಕಿನ ತಿತಿಮತಿ ಗ್ರಾ.ಪಂ. ಅರೆಕೇರಿ 1, 2,3 (4 ಸ್ಥಾನ) ಪರಿಶಿಷ್ಟ ಪಂಗಡ, ಪರಿಶಿಷ್ಟ ಪಂಗಡ(ಮ), ಪರಿಶಿಷ್ಟ ಪಂಗಡ(ಮ) ಮತ್ತು ಸಾಮಾನ್ಯ, ಮಾಲ್ದಾರೆ ಗ್ರಾ.ಪಂ.ಯ ಮಾಲ್ದಾರೆ-2(1 ಸ್ಥಾನ) ಪ.ಜಾ, ಚೆನ್ನಯ್ಯನಕೋಟೆ ಗ್ರಾ.ಪಂ. ಚೆನ್ನಯ್ಯನಕೋಟೆ-2(1 ಸ್ಥಾನ), ಪ.ಪಂ.(ಮ), ಕಾರ್ಮಾಡು ಗ್ರಾ.ಪಂ.ಯ ಕಾವಾಡಿ(1 ಸ್ಥಾನ) ಹಿಂ.ವರ್ಗ.ಬ, ಕಾರ್ಮಾಡು-1(1 ಸ್ಥಾನ) ಪರಿಶಿಷ್ಟ ಪಂಗಡ(ಮ). 
      ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 308ಎಸಿ ಪ್ರಕಾರ ಚುನಾವಣಾ ನೀತಿ ಸಂಹಿತೆಯು ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಡಿಸೆಂಬರ್ 30 ವರೆಗೆ ಜಾರಿಯಲ್ಲಿರುತ್ತದೆ. 
ಗ್ರಾಮ ಪಂಚಾಯಿತಿಯ ಯಾವುದೇ ಕ್ಷೇತ್ರದಲ್ಲಿ ನಾಮಪತ್ರ ಸ್ವೀಕೃತವಾಗದೇ ಚುನಾವಣೆ ಪ್ರಕ್ರಿಯೆ ಮುಂದುವರೆಯಲಾಗದೆ ಇರುವಂತಹ ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ಅಭ್ಯರ್ಥಿಗಳ ನಾಮಪತ್ರ ತಿರಸ್ಕøತ / ನಾಮಪತ್ರ ಹಿಂತೆಗೆತ ಮತ್ತಿತರ ಕಾರಣಗಳಿಂದ ಯಾವುದೇ ಅಭ್ಯರ್ಥಿಯು ಕಣದಲ್ಲಿರದೆ, ಆ ಗ್ರಾಮ ಪಂಚಾಯಿತಿಯ ಯಾವುದೇ ಸ್ಥಾನಕ್ಕೂ ಚುನಾವಣೆ ನಡೆಯದೇ ಇದ್ದಲ್ಲಿ ಅಥವಾ ಗ್ರಾಮ ಪಂಚಾಯಿತಿಯಲ್ಲಿನ ಚುನಾವಣೆ ಘೋಷಿಸಿರುವ ಎಲ್ಲಾ ಸ್ಥಾನಗಳೂ ಅವಿರೋಧವಾಗಿ ಆಯ್ಕೆಯಾಗಿದ್ದ, ಆಯ್ಕೆಯಾದ ಅಭ್ಯರ್ಥಿಯ ಫಲಿತಾಂಶವನ್ನು ಚುನಾವಣಾಧಿಕಾರಿಯು ಘೋಷಿಸಿದ್ದಲ್ಲಿ ಅಂತಹ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನೀತಿಸಂಹಿತೆ ಜಾರಿಯಲ್ಲಿರುವುದು ತಕ್ಷಣದಿಂದ ಕೊನೆಗೊಳ್ಳಲಿದೆ.   
ಚುನಾವಣಾಧಿಕಾರಿಗಳ ನೇಮಕ ಮಾಡಲಾದ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಡಿಸೆಂಬರ್, 13 ರಿಂದ  ನಾಮಪತ್ರಗಳನ್ನು ಸ್ವೀಕರಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಐಎನ್ಎTಸ್ ಶಿವಾಲಿಕ್’ ಮಾದರಿಯ ಯುದ್ಧ ನೌಕೆ ಲೋಕಾರ್ಪಣೆ