ಗೃಹಜ್ಯೋತಿ ಕರೆಂಟ್ ಬಿಲ್ ಮುಂಭಾಗ ಹಾಗೂ ಹಿಂಭಾಗ ಮುದ್ರಣದಲ್ಲಿ ಬದಲಾವಣೆ ಮಾಡಲಾಗಿದೆ.ಜುಲೈ ತಿಂಗಳ ಕರೆಂಟ್ ಬಿಲ್ ಹೇಗಿರುತ್ತೆ?ಕರೆಂಟ್ ಬಿಲ್ ಹೇಗೆ ಹಾಕ್ತಾರೆ ಗೊತ್ತಾ.?ಬಿಲ್ ನಲ್ಲಿ ಸಿಎಂ, ಡಿಸಿಎಂ, ಇಂಧನ ಸಚಿವರ ಫೋಟೋ ಮುದ್ರಣವಾಗಿದೆ.ಹಿಂಬದಿಯ ಬಿಲ್ ನಲ್ಲಿ ವಿದ್ಯುತ್ ಬಿಲ್ ಸೂಚನೆಗಳ ಕುರಿತು ಗ್ರಾಹಕರಿಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ
ಜೂನ್ ತಿಂಗಳ ಹಾಗೂ ಜುಲೈ ತಿಂಗಳ ಬಿಲ್ ನಲ್ಲಿ ಭಾರೀ ವ್ಯತ್ಯಾಸವಿದೆ.ಗೃಹಜ್ಯೋತಿ ಅನುಷ್ಟಾನ ಹಿನ್ನೆಲೆ ಕರೆಂಟ್ ಬಿಲ್ ಬದಲಾವಣೆ ಮಾಡಲಾಗಿದೆ.ಗ್ರಾಹಕರ ವಿದ್ಯುತ್ ಬಳಕೆಯ ಮಾಹಿತಿ ಬಿಲ್ ನಲ್ಲಿ ಪ್ರಿಂಟ್ ಆಗಿದೆ.ಎಲ್ಲಾ ಎಸ್ಕಾಂನಲ್ಲಿ ಏಕರೂಪದ ಬಿಲ್ ನೀಡಲು ಇಂಧನ ಇಲಾಖೆ ನಿರ್ಧಾರ ಮಾಡಿದೆ.ಆದ್ರೆ ಆಯಾ ಎಸ್ಕಾಂನ ಯೂನಿಟ್ ಬೆಲೆ, ಹೊಂದಾಣಿಕೆ ವೆಚ್ಚದಲ್ಲಿ ಬದಲಾವಣೆ ಮಾಡಲಾಗಿದೆ.
ಬಿಲ್ ನಲ್ಲಿ ಏನಿರುತ್ತೆ?
- ಬಿಲ್ ಮುಂಬದಿಯಲ್ಲಿ ಕರೆಂಟ್ ಬಿಲ್
- ಗೃಹಜ್ಯೋತಿ ಯೂನಿಟ್ ಮಾಹಿತಿ
- ಬಿಲ್ ಪ್ರತಿ ಕಾಲಂ ಸ್ಪಷ್ಟ
- ಹೆಚ್ಚುವರಿ ಸರಾಸರಿ ವಿದ್ಯುತ್ ಬಳಕೆ ಯೂನಿಟ್
- ಗೃಹಜ್ಯೋತಿ ಪರಿಗಣಿಸಿದ ಯೂನಿಟ್ ಅಂಶ ಕಾಲಂ ಸೇರ್ಪಡೆ
- ನಗರ, ಗ್ರಾಮೀಣ ಪ್ರದೇಶದ ಬಿಲ್ ತುಸು ಭಿನ್ನ
- ಬೆಸ್ಕಾಂ, ನಾಲ್ಕು ಎಸ್ಕಾಂ ಶುಲ್ಕ, ವಿದ್ಯುತ್ ದರದಲ್ಲಿ ವ್ಯತ್ಯಾಸ ಇರಲಿದೆ
ಬಿಲ್ ಹಿಂಬದಿಯಲ್ಲಿ ಏನಿರಲಿದೆ?
- ಸಿಎಂ ಸಿದ್ರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಭಾವಚಿತ್ರ ಮುದ್ರಣ