ಬೆಂಗಳೂರು : ಕೊರೊನಾ ವೈರಸ್ ಕಾಟದ ನಡುವೆ ಇದೀಗ ಮಹಾರಾಷ್ಟ್ರದ ಬಳಿಕ ರಾಜ್ಯಕ್ಕೂ ಮಿಡತೆ ಕಾಟ ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಈಗಾಗಲೇ ಮಿಡತೆ ದಾಳಿಗೆ ಉತ್ತರ ಭಾರತ ತತ್ತರಿಸಿ ಹೋಗಿದೆ ಪಾಕ್ ಮೂಲಕ ಭಾರತಕ್ಕೆ ನುಗ್ಗಿದ ಮಿಡತೆ ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಉತ್ತರಪ್ರದೇಶ, ಮಹಾರಾಷ್ಟ್ರದಲ್ಲಿ ಕಾಟ ನೀಡುತ್ತಿವೆ. ಮಿಡತೆಗಳ ದಾಳಿಯಿಂದ ಅಪಾರ ಬೆಳೆ ನಾಶವಾಗಿದೆ.
ಇದೀಗ ಕರ್ನಾಟಕಕ್ಕೂ ಮಿಡತೆ ದಾಳಿ ಭೀತಿ ಎದುರಾಗಿದ್ದು, ಬೀದರ್ ಮೂಲಕ ರಾಜ್ಯಕ್ಕೆ ಮಿಡತೆ ಎಂಟ್ರಿಯಾಗುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ವಹಿಸಲು ಡಿಸಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೇ ದಕ್ಷಿಣದತ್ತ ಗಾಳಿ ಬೀಸಿದರೆ ಭಾರೀ ಅಪಾಯ ಎದುರಾಗಲಿದೆ ಎನ್ನಲಾಗಿದೆ. ಮಿಡತೆ ದಾಳಿ ತಡೆಯಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಎಲ್ಲಾ ಕಡೆ ಕಟ್ಟೆಚ್ಚರ ವಹಿಸಲು ಎಲ್ಲ ಡಿಸಿಗಳಿಗೂ ಸೂಚನೆ ನೀಡಲಾಗಿದೆ.