Select Your Language

Notifications

webdunia
webdunia
webdunia
webdunia

ಇಂದಿನಿಂದ ಅದ್ಧೂರಿ ಏರೋ ಇಂಡಿಯಾ-2023 ಏರ್ ಶೋ

ಇಂದಿನಿಂದ ಅದ್ಧೂರಿ ಏರೋ ಇಂಡಿಯಾ-2023 ಏರ್ ಶೋ
ಬೆಂಗಳೂರು , ಸೋಮವಾರ, 13 ಫೆಬ್ರವರಿ 2023 (08:55 IST)
ಬೆಂಗಳೂರು : ವಿಶ್ವದ ಗಮನ ಸೆಳೆಯುವ ಏರೋ ಇಂಡಿಯಾ-2023 ಏರ್ಶೋ ಇಂದಿನಿಂದ (ಫೆ.13) ಆರಂಭಗೊಳ್ಳುತ್ತಿದೆ. ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ 5 ದಿನಗಳ ಕಾಲ ನಡೆಯುವ ವೈಮಾನಿಕ ಪ್ರದರ್ಶನಕ್ಕಿಂದು ಪ್ರಧಾನಿ ಮೋದಿ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.

ವಿಶ್ವದ ಗಮನ ಸೆಳೆಯುವ 14ನೇ ಆವೃತಿಯ ಏರ್ ಶೋಗೆ ಕೌಂಟ್ ಡೌನ್ ಶುರುವಾಗಿದೆ. 5 ದಿನಗಳ ಕಾಲ ನಡೆಯಲಿರುವ ಏರೋ ಇಂಡಿಯಾ ಪ್ರದರ್ಶನಕ್ಕೆ ಈಗಾಗಲೇ ಯಲಹಂಕ ವಾಯನೆಲೆ ಸಜ್ಜಾಗಿದ್ದು, ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿ ಹಲವು ಗಣ್ಯರು ಬೆಂಗಳೂರಿಗೆ ಆಗಮಿಸಿದ್ದಾರೆ. ಏರ್ ಶೋ ಹಿನ್ನೆಲೆ ಫೆ.14ರಂದು ಬೆಳಗ್ಗೆ 7.30 ರಿಂದ ಏರ್ ಪೋರ್ಟ್ ಮೇಲ್ಸೇತುವೆ ಮೇಲೆ ವಾಹನಗಳ ಸಂಚಾರಕ್ಕೆ ನಿರ್ಭಂಧ ವಿಧಿಸಲಾಗಿದೆ. 

ಈ ಬಾರಿಯ ಏರ್ ಶೋನಲ್ಲಿ 35,000 ಚದರ ಅಡಿಗಳಲ್ಲಿ ಎಕ್ಸಿಬಿಷನ್ ಆಯೋಜನೆ ಮಾಡಲಾಗಿದ್ದು, ಸಾರ್ವಜನಿಕರಿಗೆ ಜಿಕೆವಿಕೆ ಹಾಗೂ ಜಕ್ಕೂರಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ಫೆಬ್ರವರಿ 14ರಂದು ನಡೆಯುವ ಕಾರ್ಯಕ್ರಮಕ್ಕೆ 4 ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದ್ದು, ಇಂಡಿಯಾ ಪೆವಿಲಿಯನ್ನಲ್ಲಿ 115 ಕಂಪನಿಗಳು ಭಾಗಿಯಾಗುತ್ತಿದ್ದು, 227 ಉತ್ಪನ್ನಗಳ ಪ್ರದರ್ಶನ ಇರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪರೀಕ್ಷೆಗೂ ವಿದ್ಯಾರ್ಥಿಗಳು ಶುಲ್ಕ ಕಟ್ಟಬೇಕು : ಶಿಕ್ಷಣ ಇಲಾಖೆ