Select Your Language

Notifications

webdunia
webdunia
webdunia
webdunia

ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಬಾವಿಗೆ ಹಾರಿ ಆತ್ಮಹತ್ಯೆ

ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಬಾವಿಗೆ ಹಾರಿ ಆತ್ಮಹತ್ಯೆ
bengaluru , ಶನಿವಾರ, 28 ಆಗಸ್ಟ್ 2021 (16:48 IST)
ಪಂಚಾಯತ್ ನ ಮಾಜಿ ಉಪಾಧ್ಯಕ್ಷರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.
ಲಾಯಿಲ ನಿವಾಸಿ ಸಂತೋಷ್ ಕುಮಾರ್, ಆತ್ಮಹತ್ಯೆ ಮಾಡಿಕೊಂಡವರು. ಇವರು ಬೆಳ್ತಂಗಡಿಯ ಸರಕಾರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲ‌ ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ಬೆನ್ನುಮೂಳೆ ಮುರಿತಕ್ಕೊಳಗಾಗಿದ್ದರು. ಆರಂಭದಲ್ಲಿ ಚಾಪೆ ಹಿಡಿದು ಮಲಗಿದ್ದ ಅವರು ಕೊಕ್ಕಡ
ದ ಸೇವಾಧಾಮ ಬೆನ್ನುಮೂಳೆ ಮುರಿತಕ್ಕೊಳಗಾದವರ ಆರೈಕೆ ಕೇಂದ್ರದಿಂದ ಚಿಕಿತ್ಸೆ ಮತ್ತು ಫಿಸಿಯೋಥೆರಪಿ ಪಡೆದು ಚೇತರಿಸಿಕೊಂಡು ಸ್ವಾವಲಂಬಿಯಾಗಿ ದುಡಿಯುತ್ತಿದ್ದರು.
ಆರಂಭದಲ್ಲಿ ಉಜಿರೆ ಬೆಳ್ತಂಗಡಿ ಅಪೆ ರಿಕ್ಷಾ ಚಾಲಕ ಮಾಲಕರ‌ ಸಂಘದ ಪದಾಧಿಕಾರಿಯಾಗಿ, ಲಾಯಿಲ ಶ್ರೀ ಗಣೇಶೋತ್ಸವ ಸಮಿತಿ, ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ದೀರ್ಘಕಾಲಿಕ ಅನಾರೋಗ್ಯದಿಂದಲೇ ಬೇಸತ್ತು ಅವರು ಜೀವನದಲ್ಲಿ ಜಿಗುಪ್ಸೆ ಹೊಂದಿ‌ ಈ ರೀತಿ ಕೃತ್ಯವೆಸಗಿದ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

124.26 ಕೋಟಿ ರೂ. ನೀರಿನ ಬಿಲ್ ಬಾಕಿ!