Publish Date: Tue, 05 Dec 2017 (12:15 IST)
Updated Date: Tue, 05 Dec 2017 (12:23 IST)
ಬೆಂಗಳೂರು: ಖ್ಯಾತ ಪ್ರತಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆಗೈದು ಇಂದಿಗೆ ಮೂರು ತಿಂಗಳುಗಳು ಕಳೆದಿದೆ. ಇನ್ನೂ ಆರೋಪಿಗಳನ್ನು ಕಂಡುಹಿಡಿಯಲಾಗುತ್ತಿಲ್ಲ ಎಂದು ಆಕ್ರೋಶಗೊಂಡ ಗೌರಿ ಬೆಂಬಲಿಗರಿಂದ ನಾಳೆ ಮೌನ ಪ್ರತಿಭಟನೆ.
ಮೂರು ತಿಂಗಳಗಳ ಹಿಂದೆ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ನಿಗೂಢವಾಗಿ ಹತ್ಯೆಗೈಯಲಾಗಿದೆ. ಈ ಘಟನೆ ಸಂಭವಿಸಿ ಇಂದಿಗೆ ಮೂರು ತಿಂಗಳುಗಳು ಕಳೆದರು ಹಂತಕರ ಸುಳಿವು ಮಾತ್ರ ಪತ್ತೆಯಾಗಿಲ್ಲ.
ಬುಲೆಟ್ ಮಾದರಿಯನ್ನು ಹಿಡಿದು ಎಸ್ ಐಟಿ ತಂಡ ಮೂರು ತಿಂಗಳಿಂದ ಕಾರ್ಯಾಚರಣೆ ನಡೆಸುತ್ತಿದೆ. ತನಿಖಾ ತಂಡವು 510 ಮಂದಿಯನ್ನು ವಿಚಾರಣೆ ನಡೆಸಿದರೂ ಹಂತಕರ ಸುಳಿವು ಮಾತ್ರ ಸಿಗಲಿಲ್ಲ ಎಂದು ಆಕ್ರೋಶಗೊಂಡು ಗೌರಿ ಬೆಂಬಲಿಗರು ನಾಳೆ ಮೌನ ಪ್ರತಿಭಟನೆ ನಡೆಸಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ