ಸರಕಾರಿ ಶಾಲೆಗಳಿಗೆ ಶಾಲಾ ಮಕ್ಕಳನ್ನು ದೂರದ ಊರುಗಳಿಂದ ಕರೆದುಕೊಂಡು ಬರದಲು ಶಾಲಾ ವಾಹನ ಖರೀದಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸರಕಾರಿ ಶಾಲೆಗಳಿಗೆ ಶಾಲಾ ಮಕ್ಕಳನ್ನು ದೂರದ ಊರುಗಳಿಂದ ಕರೆದುಕೊಂಡು ಬರದಲು ಶಾಲಾ ವಾಹನ ಖರೀದಿಸಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಬಗ್ಗೆ ಪ್ರದೇಶಾಭಿವೃದ್ಧಿ ಮಂಡಳಿ ವಿಭಾಗ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಡಿ ಚಂದ್ರಶೇಖರಯ್ಯ ಅಧಿಕೃತ ಅಧಿಸೂಚನೆ ಪ್ರಕಟಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ನಿರ್ವಹಣೆಗೆ ಸರ್ಕಾರ ಅನುಮೋದಿಸಿರುವ ಅನುದಾನದ ಪೈಕಿ ಮೊದಲ ಹಂತವಾಗಿ 19.81 ಕೋಟಿ ರು. ಅನುದಾನವನ್ನು ಬಿಡುಗಡೆ ಮಾಡಿದೆ. ರಾಜ್ಯದ ಒಟ್ಟು 47,959 ಸರ್ಕಾರಿ ಶಾಲೆಗಳ ನಿರ್ವಹಣೆಗೆ 2022ನೇ ಸಾಲಿನಲ್ಲಿ ಸರ್ಕಾರ 143.75 ಕೋಟಿ ರು. ಅನುದಾನವನ್ನು ಅನುಮೋದಿಸಿದೆ