Publish Date: Thu, 19 Dec 2019 (17:35 IST)
Updated Date: Thu, 19 Dec 2019 (17:37 IST)
ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರ ಪುಕ್ಕಲು ಸರಕಾರವಾಗಿದೆ.
ಹೀಗಂತ ಮಾಜಿ ಸಿಎಂ ಹಾಗೂ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದಲ್ಲಿ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ರಾಜ್ಯದಲ್ಲಿ ಸರಕಾರ ನಿಷೇದಾಜ್ಞೆ ಜಾರಿಗೊಳಿಸಿದೆ.
ಪ್ರತಿಭಟನೆಯನ್ನು ಎದುರಿಸಲಾಗದೇ, ಜನಶಕ್ತಿಗೆ ಹೆದರಿರೋ ಸರಕಾರ ಪುಕ್ಕಲುತನದಿಂದ ನಿಷೇದಾಜ್ಞೆ ಜಾರಿಗೊಳಿಸಿದೆ ಅಂತ ಟೀಕೆ ಮಾಡಿದ್ದಾರೆ.