Select Your Language

Notifications

webdunia
webdunia
webdunia
webdunia

ಹೊಸದಾಗಿ ವೈನ್ ಶಾಪ್ ಮತ್ತು ಬಾರ್ ಲೈಸನ್ಸ್ ನೀಡಲು ಸರಕಾರ ಚಿಂತನೆ

ಹೊಸದಾಗಿ ವೈನ್ ಶಾಪ್ ಮತ್ತು ಬಾರ್ ಲೈಸನ್ಸ್ ನೀಡಲು ಸರಕಾರ ಚಿಂತನೆ
ನವದೆಹಲಿ , ಮಂಗಳವಾರ, 5 ಜುಲೈ 2016 (17:45 IST)
ರಾಜ್ಯದಲ್ಲಿ ಹೊಸದಾಗಿ ವೈನ್ ಶಾಪ್ ಮತ್ತು ಬಾರ್ ಲೈಸನ್ಸ್ ನೀಡಲು ಅಬಕಾರಿ ಸಚಿವ ಎಚ್‌.ವೈ.ಮೇಟಿ ಚಿಂತನೆ ನಡೆಸಿದ್ದಾರೆ.
 
ರಾಜ್ಯದಲ್ಲಿ ಕಳ್ಳಬಟ್ಟಿ ಸಾರಾಯಿ ಮಾರಾಟ ತಡೆಯಲು ಮತ್ತು ಉತ್ತಮ ಗುಣಮಟ್ಟದ ಸಾರಾಯಿ ಸರಬರಾಜು ಮಾಡುವ ದೃಷ್ಟಿಯಿಂದ ಹೊಸದಾಗಿ ವೈನ್ ಶಾಪ್ ಮತ್ತು ಬಾರ್ ಲೈಸನ್ಸ್ ನೀಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಅಬಕಾರಿ ಸಚಿವರು ತಿಳಿಸಿದ್ದಾರೆ.
 
ವಿರೋಧ ಪಕ್ಷ ಮತ್ತು ಮಹಿಳಾ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
 
2011 ರ ಜನಗಣತಿ ಪ್ರಕಾರ, ರಾಜ್ಯದಲ್ಲಿ 16 ಸಾವಿರ ವೈನ್‌ ಶಾಪ್‌ ಮತ್ತು ಬಾರ್ ಲೈಸನ್ಸ್ ಅವಶ್ಯಕವಾಗಿದೆ. ಆದರೆ, ಪ್ರಸ್ತುತ 9 ಸಾವಿರ ವೈನ್‌ ಶಾಪ್‌ ಮತ್ತು ಬಾರ್ ಲೈಸನ್ಸ್‌ಗಳಿವೆ. ಪ್ರತಿ ತಾಲೂಕಿಗೂ 5 ಎಮ್‌ಎಸ್‌ಐಎಲ್ ಶಾಪ್‌ಗಳ ಬೇಡಿಕೆ ಇದೆ ಎಂದು ಸಚಿವ  ಎಚ್‌.ವೈ.ಮೇಟಿ ಹೇಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಂಪುಟದಿಂದ ಕೈಬಿಡಲಾಗಿದೆ ಎನ್ನುವ ವರದಿಗಳು ಆಧಾರರಹಿತ: ಸಚಿವ ಸಿದ್ದೇಶ್ವರ್