Select Your Language

Notifications

webdunia
webdunia
webdunia
webdunia

ಸಾಲ ನೀಡುವ ಆ್ಯಪ್ ಗಳನ್ನ ತೆಗೆದುಹಾಕಿದ ಗೂಗಲ್

ಸಾಲ ನೀಡುವ ಆ್ಯಪ್ ಗಳನ್ನ ತೆಗೆದುಹಾಕಿದ ಗೂಗಲ್
bangalore , ಸೋಮವಾರ, 12 ಜೂನ್ 2023 (18:35 IST)
ತಪ್ಪು ಮಾಹಿತಿ ಮತ್ತು ಆಫ್‌ಲೈನ್ ಕಾರ್ಯಕ್ಷಮತೆ ಹಿನ್ನೆಲೆ ಪ್ಲೇಸ್ಟೋರ್​ನಲ್ಲಿರುವ ಸುಮಾರು 2000ಕ್ಕೂ ಹೆಚ್ಚು ಸಾಲ ನೀಡುವ ಆಯಪ್​ಗಳನ್ನು ಗೂಗಲ್ ತೆಗೆದುಹಾಕಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಇಂತಹ ಆಯಪ್​ಗಳ ಮೇಲಿನ ನಿಯಮಾವಳಿಗಳು ಕಠಿಣಗೊಳಿಸುವ ಸಾಧ್ಯಯತೆ ಇದೆ.
ಮಾತನಾಡಿದ ಗೂಗಲ್ ಹಿರಿಯ ನಿರ್ದೇಶಕ, ಏಷ್ಯಾ ಪೆಸಿಫಿಕ್ ಟ್ರಸ್ಟ್ ಮತ್ತು ಸೆಕ್ಯುರಿಟಿ ಮುಖ್ಯಸ್ಥ ಸೈಕತ್ ಮಿತ್ರಾ, ಕಂಪನಿಯು ಕಾರ್ಯನಿರ್ವಹಿಸುವ ಎಲ್ಲಾ ಕ್ಷೇತ್ರಗಳಲ್ಲಿ ನಿಯಮಾವಳಿಗಳನ್ನು ಅನುಸರಿಸಲು ಬದ್ಧವಾಗಿದೆ. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಆನ್‌ಲೈನ್ ವಂಚನೆಗಳನ್ನು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಜನವರಿಯಿಂದ ಭಾರತದಲ್ಲಿ ಪ್ಲೇ ಸ್ಟೋರ್‌ನಿಂದ ಸಾಲ ನೀಡುವ 2,000ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳನ್ನು ತೆಗೆದುಹಾಕಲಾಗಿದೆ. ಕಾರ್ಯವಿಧಾನಗಳ ಉಲ್ಲಂಘನೆ, ಮಾಹಿತಿ ಬಹಿರಂಗಪಡಿಸದಿರುವುದು ಮತ್ತು ಸುಳ್ಳು ಮಾಹಿತಿಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿರಾ ಕ್ಯಾಂಟೀನ್ ಪುನರ್ ಆರಂಭ ಮಾಡಬೇಕು ಅಂತ ಚರ್ಚೆ ಮಾಡಿದ್ದೇವೆ- ಸಿಎಂ