ಜಾಗತಿಕವಾಗಿ ಇಂಟರ್ನೆಟ್ ಅಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಸರ್ಚ್ ಎಂಜಿನ್ ಗೂಗಲ್ ಇಂದು 25 ವರ್ಷವನ್ನು ಪೂರೈಸಿದೆ.ವಿಭಿನ್ನವಾದ ಡೂಡಲ್‌ನೊಂದಿಗೆ ಗೂಗಲ್ ತನ್ನ 25ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದೆ. ಗೂಗಲ್ ಈ ಬಗ್ಗೆ ತನ್ನ ಬ್ಲಾಗ್‌ನಲ್ಲಿ ಬರೆದುಕೊಂಡಿದೆ. ಕಳೆದ 25 ವರ್ಷಗಳಲ್ಲಿ ಕಂಪನಿ ಬೆಳೆದು ಬಂದ ಹಾದಿ, 1998ರಿಂದ 2023ರ ವರೆಗೆ ತನ್ನ ಬದಲಾದ ಲೋಗೋಗಳನ್ನು ತೋರಿಸುವ ಡೂಡಲ್ ಅನ್ನು ತನ್ನ ಬ್ಲಾಗ್‌ನಲ್ಲಿ ಹಂಚಿಕೊಂಡಿದೆ. 90ರ ದಶಕದ ಉತ್ತರಾರ್ಧದಲ್ಲಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನ ಕಾರ್ಯಕ್ರಮದಲ್ಲಿ ಭೇಟಿಯಾದ ಡಾಕ್ಟರೇಟ್ ವಿದ್ಯಾರ್ಥಿಗಳಾದ ಸೆರ್ಗೆ ಬ್ರಿನ್ ಮತ್ತು ಲ್ಯಾರಿ ಪೇಜ್ ಅವರು ಗೂಗಲ್ ಅನ್ನು ಅಭಿವೃದ್ಧಿಪಡಿಸಿದರು.