Daily Horoscope
✕

ಎಣ್ಣೆ ಪ್ರಿಯರಿಗೆ ಶೀಘ್ರವೇ ಗುಡ್ ನ್ಯೂಸ್ !

Webdunia
ಭಾನುವಾರ, 15 ಮೇ 2022 (11:45 IST)
ಬೆಂಗಳೂರು: ತಾತ್ಕಾಲಿಕ ಅಥವಾ ಸಾಂದರ್ಭಿಕ ಸನ್ನದು (ಸಿಎಲ್‌-5) ಪಡೆಯುವವರಿಗೆ ಮದ್ಯ ಖರೀದಿಸಲು ಇದ್ದ ನಿರ್ಬಂಧಗಳನ್ನು ಸಡಿಲಗೊಳಿಸಲು ಅಬಕಾರಿ ಇಲಾಖೆ ಮುಂದಾಗಿದ್ದು, ಶೀಘ್ರದಲ್ಲಿ ಆದೇಶ ಪ್ರಕಟಿಸಲಿದೆ.
ಅಬಕಾರಿ ಕಾಯಿದೆಗೆ ತಿದ್ದುಪಡಿ ತಂದು ಕೆಎಸ್‌ಬಿಸಿಎಲ್‌ ಡಿಪೋಗಳಲ್ಲಿ ಮಾತ್ರವಲ್ಲದೆ ಇತರೆ ಮದ್ಯ ಮಳಿಗೆಗಳಲ್ಲೂ ಮದ್ಯ ಖರೀದಿಗೆ ಅವಕಾಶ ನೀಡಲು ಏಪ್ರಿಲ್‌ನಲ್ಲಿ ಕರಡು ನಿಯಮಗಳನ್ನು ಪ್ರಕಟಿಸಿತ್ತು.
 
ಮದ್ಯ ಮಾರಾಟಗಾರರ ಒಕ್ಕೂಟ ಸೇರಿದಂತೆ ಯಾರೂ ಸಹ ಕರಡು ನಿಯಮಕ್ಕೆ ಆಕ್ಷೇಪ ವ್ಯಕ್ತಪಡಿಸಿಲ್ಲ. ಹೀಗಾಗಿ ಸದ್ಯದಲ್ಲೇ ಅಂತಿಮ ಆದೇಶ ಪ್ರಕಟಿಸಲಾಗುವುದು ಎಂದು ಅಬಕಾರಿ ಇಲಾಖೆ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
 
ಸಿಎಲ್‌-5 ಸನ್ನದುದಾರರು ಈವರೆಗೆ ಕರ್ನಾಟಕ ರಾಜ್ಯ ಪಾನೀಯ ನಿಗಮ (ಕೆಎಸ್‌ಬಿಸಿಎಲ್‌) ಡಿಪೋಗಳಿಂದ ಮಾತ್ರ ಮದ್ಯ ಖರೀದಿ ಮಾಡಲು ಅನುಮತಿ ಇತ್ತು. ನಿಗದಿತ ದಿನಾಂಕದಂದು ಸನ್ನದು ಜತೆಗೆ ಡಿಪೋಗೆ ತೆರಳಿ ಆಗ ಲಭ್ಯವಿರುವ ಮದ್ಯಗಳಿಗೆ ಇಂಡೆಂಟ್‌ ಸಲ್ಲಿಸಬೇಕಿತ್ತು. ಇಂಡೆಂಟ್‌ ಸಲ್ಲಿಸಿರುವ ಮದ್ಯ ಲಭ್ಯತೆ ಆಧಾರದ ಮೇಲೆ ನಿಗಮದ ಬ್ಯಾಂಕ್‌ ಖಾತೆಗೆ ಹಣ ಪಾವತಿಸಬೇಕಿತ್ತು. ಬಳಿಕವಷ್ಟೇ ಮದ್ಯವನ್ನು ನೀಡಲಾಗುತ್ತಿತ್ತು. ಈ ವೇಳೆ ಅಗತ್ಯವಿರುವ ಬ್ರ್ಯಾಂಡ್‌ನ ಬಿಯರ್‌ ಅಥವಾ ಮದ್ಯ ಲಭ್ಯವಾಗುತ್ತಿರಲಿಲ್ಲ ಎಂಬ ದೂರುಗಳು ಇದ್ದವು.
 
ಇದೀಗ ಅಬಕಾರಿ ಇಲಾಖೆ ನಿಯಮಗಳಿಗೆ ತಿದ್ದುಪಡಿ ತಂದು ಡಿಪೋಗಳಲ್ಲಿ ಮಾತ್ರವಲ್ಲದೆ ಸಿಎಲ್‌-11 , ಸಿಎಲ್‌-2 ಚಿಲ್ಲರೆ ಮದ್ಯ ಮಾರಾಟ ಮಳಿಗೆ, ಸಿಎಲ್‌-11ಸಿ ಎಂಎಸ್‌ಐಎಲ್‌ ಮಳಿಗೆಗಳಲ್ಲೂ ಸಿಎಲ್‌-5 ಸನ್ನದು ತೋರಿಸಿ ಮದ್ಯ ಖರೀದಿ ಮಾಡಬಹುದು. ಸಿಎಲ್‌-5 ಸನ್ನದುದಾರರಿಗೆ ಅಗತ್ಯವಿರುವ ಯಾವುದೇ ರೀತಿಯ ಮದ್ಯವನ್ನು ಸೂಕ್ತ ಬಿಲ್ಲುಗಳ ನಿರ್ವಹಣೆಯೊಂದಿಗೆ ನೀಡಲು ಅವಕಾಶ ನೀಡಲಾಗಿದೆ.
 
ಮದುವೆ, ಹುಟ್ಟುಹಬ್ಬ ಆಚರಣೆ, ಬೀಗರೂಟ ಮತ್ತಿತರ ವೈಯಕ್ತಿಕ ಕಾರ್ಯಕ್ರಮಗಳಲ್ಲಿ ಮದ್ಯ ಬಳಕೆಗೆ ತಾತ್ಕಾಲಿಕ ಸನ್ನದು (ಸಿಎಲ್‌-5) ಪಡೆಯುವುದು ಕಡ್ಡಾಯ. ಸನ್ನದು ಅಥವಾ ಪರವಾನಗಿ ಪಡೆಯದೆ ಮದ್ಯ ಬಳಕೆ ಮಾಡಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಅವಕಾಶವಿದೆ.
 
ಹೀಗಾಗಿ ಸ್ಥಳೀಯ ಪೊಲೀಸ್‌ ಠಾಣೆಯಿಂದ ಎನ್‌ಒಸಿ ಪಡೆದು ಜಿಲ್ಲಾ ಅಬಕಾರಿ ಆಯುಕ್ತರ ಬಳಿ 10 ಸಾವಿರ ರು. ಶುಲ್ಕ ಪಾವತಿಸಿದರೆ ಒಂದು ದಿನದ ಮಟ್ಟಿಗೆ ಸಿಎಲ್‌-5 ಸನ್ನದು ದೊರೆಯಲಿದೆ. ಅಲ್ಲದೆ ಅಬಕಾರಿ ಆಯುಕ್ತರು ಸ್ಥಳೀಯ ಪೊಲೀಸ್‌ ಠಾಣೆಗೂ ಸನ್ನದು ಪತ್ರವನ್ನು ಕಳುಹಿಸಲಿದ್ದು, ಮಿಲಿಟರಿ ಮದ್ಯ, ಡ್ಯೂಟಿ ಫ್ರೀ ಮದ್ಯ ಹೊರತುಪಡಿಸಿ ಸ್ವದೇಶಿ ಹಾಗೂ ವಿದೇಶಿ ಮದ್ಯ ಬಳಕೆಗೆ ಅವಕಾಶ ನೀಡಲಾಗುತ್ತದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಎಂಕೆ ಸ್ಟಾಲಿನ್ ರನ್ನೇ ಸೋಲಿಸಿದ್ದ ಟಿವಿಕೆ ಶಾಸಕ ಎಸ್ ವಿ ಬಾಬು ಇನ್ನಿಲ್ಲ

ಹೆಂಡ್ತಿ ಪ್ರೆಗ್ನೆಂಟ್ ನಿಧಾನಕ್ಕೆ ಬಸ್ ಓಡಿಸಪ್ಪಾ ಎಂದಿದ್ದೇ ತಪ್ಪಾಯ್ತು: ಸರ್ಕಾರಿ ಬಸ್ ಚಾಲಕನ ವರ್ತನೆ ನಿಜಕ್ಕೂ ಶಾಕಿಂಗ್ Video

ಉದ್ಯಮಿಗಳು, ತೆರಿಗೆದಾರರನ್ನು ತೆಗಳಿದರೆ ದೇಶ ಸಾಗಲ್ಲ: ಪ್ರಧಾನಿ ಮೋದಿ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ನಡು ರಸ್ತೆಯಲ್ಲಿ ಒಬ್ಬಾತ ಕೊಚ್ಚಿ ಕೊಲೆ ಮಾಡುತ್ತಿದ್ದರೆ ಸಿನಿಮಾದಂತೆ ನೋಡುತ್ತಿದ್ದ ಜನ: ಭೀಕರ Video ವೈರಲ್

ಮುಂದಿನ ಸುದ್ದಿ
Show comments