Select Your Language

Notifications

webdunia
webdunia
webdunia
webdunia

ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಸರಕಾರದಿಂದ ಗುಡ್ ನ್ಯೂಸ್

ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಸರಕಾರದಿಂದ ಗುಡ್ ನ್ಯೂಸ್
ಮಡಿಕೇರಿ , ಶುಕ್ರವಾರ, 22 ಮೇ 2020 (19:31 IST)
ಪ್ರಕೃತಿ ವಿಕೋಪದಿಂದಾಗಿ ಕಳೆದೆರಡು ವರ್ಷಗಳ ಹಿಂದೆ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸರಕಾರ ಶುಭ ಸುದ್ದಿ ನೀಡಿದೆ.

ಕೊಡಗು ಜಿಲ್ಲೆಯಲ್ಲಿ 2018 ರಲ್ಲಿ ಸಂಭವಿಸಿದ ಪ್ರಕೖತ್ತಿ ವಿಕೋಪದಿಂದಾಗಿ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಜೂನ್ ಮೊದಲ ವಾರದಲ್ಲಿ ಮನೆಗಳನ್ನು ಹಸ್ತಾಂತರಿಸಲಾಗುತ್ತದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಮಡಿಕೇರಿ ಬಳಿಯ ಜಂಬೂರು ಮತ್ತು ಮದೆ ಗ್ರಾಮಗಳಲ್ಲಿ ಸಕಾ೯ರದ ವತಿಯಿಂದ ನಿಮಿ೯ಸಲಾದ 463 ಮನೆಗಳನ್ನು ವೀಕ್ಷಿಸಿದರು. ಮುಖ್ಯಮಂತ್ರಿಗಳನ್ನು ಸಂಪಕಿ೯ಸಿ ಅವರ ದಿನ ನಿಗದಿಪಡಿಸಿ ಮಳೆಗಾಲಕ್ಕೂ ಮುನ್ನವೇ ಜೂನ್ ಮೊದಲ ವಾರದಲ್ಲಿ ಇಷ್ಟೂ ಮನೆಗಳನ್ನು ಹಸ್ತಾಂತರಿಸಲಾಗುತ್ತದೆ ಎಂದು ಹೇಳಿದ್ದಾರೆ.

ಇದು ಜನರ ಹಣದಿಂದ ನಿಮಿ೯ಸಲಾದ ಮನೆಗಳೇ ಹೊರತು ಯಾವುದೇ ರಾಜಕಾರಣಿಯ ಹಣದಿಂದಲ್ಲ. ಹೀಗಾಗಿ ಯಾರನ್ನು ಮನೆ ಹಸ್ತಾಂತರದ ಸಂದಭ೯ ಆಹ್ವಾನಿಸಬೇಕು ಎಂಬುದು ತನಗೆ ತಿಳಿದಿದೆ ಎಂದೂ ಸಚಿವ ಸೋಮಣ್ಣ ಪ್ರತಿಕ್ರಿಯಿಸಿದರು.

2018 ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮನೆ ಹಸ್ತಾಂತರದ ಸಂದಭ೯ ಕಾಯ೯ಕ್ರಮಕ್ಕೆ ಆಹ್ವಾನಿಸಬೇಕೆಂಬ ಕೆಲವರ ಬೇಡಿಕೆಗೆ ಸಚಿವ ಸೋಮಣ್ಣ ಈ ರೀತಿ ಪ್ರತಿಕ್ರಿಯಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

‘ನಾಡಪ್ರಭು ಕೆಂಪೇಗೌಡರ ಸಮಾಧಿ ಒಂದೇ ವರ್ಷದಲ್ಲಿ ಅಭಿವೃದ್ಧಿ’