ಮೆಟ್ರೊ ನೇರಳೆ ಮಾರ್ಗದಲ್ಲಿ ವಿಸ್ತರಿತ ನಿಲ್ದಾಣಗಳ ನಡುವೆ ನಡೆಯುತ್ತಿರುವ ವಿವಿಧ ಪರೀಕ್ಷೆಗಳು ಕೊನೇ ಹಂತ ತಲುಪಿದ್ದು ಸೆಪ್ಟೆಂಬರ್ 15 ರ ನಂತರ ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿದೆ ಎಂಬ ಮಾಹಿತಿ ಸಿಕ್ಕಿದೆ. ನೇರಳೆ ಮಾರ್ಗದಲ್ಲಿ ಬೈಯಪ್ಪನಹಳ್ಳಿ-ಕೆ.ಆರ್. ಪುರ, ನಡುವೆ 2.5 ಕಿಲೋಮೀಟರ್ ಹಾಗೂ ಕೆಂಗೇರಿ-ಚಲ್ಲಘಟ್ಟದ ನಡುವೆ 1.9 ಕಿ.ಮೀ ಕಾಮಗಾರಿಗಳು ಬಾಕಿ ಉಳಿದಿದ್ದವು. ಸದ್ಯ ಮೆಟ್ರೋ ಮಾರ್ಗ ಸಂಪೂರ್ಣ ಸಿದ್ಧವಾಗಿದ್ದು ಚಾಲನೆ ಸಿಕ್ಕರೆ ನೇರಳೆ ಮಾರ್ಗವು ಪೂರ್ವ ಬೆಂಗಳೂರು ನಗರದ ಬಹುತೇಕ ಭಾಗಗಳಿಗೆ ಸಂಪರ್ಕಿಸುತ್ತದೆ ಅಂತಾ BMRCL ಎಂಡಿ ಅಂಜುಮ್ ತಿಳಿಸಿದ್ದಾರೆ.