ಪಿಂಚಣಿದಾರರಿಗೆ ಇಪಿಎಫ್ ಒ (EPFO) ಭರ್ಜರಿ ಸಿಹಿಸುದ್ದಿ ನೀಡಿದ್ದು, ಪಿಂಚಣಿದಾರರಿಗೆ ಮಾಸಾಂತ್ಯದೊಳಗೆ ಪಿಂಚಣಿ ಕಡ್ಡಾಯವಾಗಿ ತಲುಪಿಸಲು ಕ್ರಮ ಕೈಗೊಂಡಿದೆ.
ಇಪಿಎಫ್ ಒ ಈ ಸಂಬಂಧ ಸುತ್ತೋಲೆ ಹೊರಡಿಸಿದ್ದು, ಇಪಿಎಸ್ 95 ಪದ್ದತಿಯ ಪ್ರಕಾರ, ಪಿಂಚಣಿದಾರರಿಗೆ ಪ್ರತಿ ತಿಂಗಳ ಕೊನೆಯ ಕೆಲಸದ ದಿನಾಂಕದೊಳಗೆ ಕಡ್ಡಾಯವಾಗಿ ಪಿಂಚಣಿದಾರರಿಗೆ ಪಿಂಚಣಿ ವಿತರಿಸಲಾಗುತ್ತದೆ.
ಜನವರಿ 13 ರಂದು ಇಪಿಎಫ್ ಒ ಸುತ್ತೋಲೆ ಹೊರಡಿಸಿದ್ದು, ತಿಂಗಳ ಕೊನೆಯ ಕೆಲಸದ ದಿನದೊಳಗೆ ಪಿಂಚಣಿಯನ್ನು ಪಿಂಚಣಿದಾರರ ಖಾತೆಗೆ ಕಡ್ಡಾಯವಾಗಿ ಜಮಾ ಮಾಡಬೇಕೆಂದು ತಿಳಿಸಲಾಗಿದೆ.
ಇಪಿಎಫ್ ಒ ಹೊರಡಿಸಿದ ಸುತ್ತೋಲೆಯಂತೆ ತಿಂಗಳಿನ ಮೊದಲ ಕೆಲಸದ ದಿನದಿಂದ 5 ನೇ ದಿನದವರೆಗೆ ಪಿಂಚಣಿ ವಿತರಣೆಯಾಗಬೇಕು ಎಂದು ತಿಳಿಸಿದೆ.