Publish Date: Thu, 25 Aug 2022 (18:59 IST)
Updated Date: Thu, 25 Aug 2022 (19:01 IST)
ಗೌರಿ ಗಣೇಶ ಹಬ್ಬದ ಪ್ರಯುಕ್ತ ಕೆ ಎಸ್ ಆರ್ ಟಿ ಸಿ ನಿಗಮದಿಂದ 500 ಹೆಚ್ಚುವರಿ ಬಸ್ಸುಗಳ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.ದಿನಾಂಕ 30 - 31 ರಂದು ಗೌರಿಗಣೇಶ ಹಬ್ಬಕ್ಕಾಗಿ ಕರಾರಸಾ ನಿಗಮವು,ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ದಿನಾಂಕ 29 ಮತ್ತು 30 ರಂದು ಬೆಂಗಳೂರಿನಿಂದ ಹಲವು ಕಡೆ ಬಸ್ ಗಳು ಸಂಚಾರಿಸಲು ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.ನಂತರ ರಾಜ್ಯದ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಬರಲು ದಿನಾಂಕ 31 ರವರೆಗೆ ವಿಶೇಷ ಸಾರಿಗೆ ವ್ಯವಸ್ಥೆಯನ್ನು ಕೆ ಎಸ್ ಆರ್ ಟಿ ಸಿ ನಿಗಮವು ಮಾಡಿದೆ.