ಬೆಂಗಳೂರು: ಬಿಪಿಎಲ್ ಕಾರ್ಡ್ ಹೊಂದಿರುವ ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಯೋಜನೆ ಫಲಾನುಭವಿಗಳಿಗೆ ಮತ್ತೊಂದು ಸೌಲಭ್ಯವೂ ಸಿಗಲಿದೆ. ಅದು ಏನು ಇಲ್ಲಿ ನೋಡಿ.
ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆಯೂ ಒಂದು. ಈಗಾಗಲೇ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತವಾಗಿ ಅಕ್ಕಿ ಸಿಗುತ್ತಿದೆ. 5 ಕೆಜಿ ಅಕ್ಕಿ ಮತ್ತು ಇನ್ನುಳಿದ 5 ಕೆಜಿ ಬಾಬ್ತು ಹಣ ಫಲಾನುಭವಿಗಳ ಖಾತೆಗೆ ವರ್ಗಾವಣೆಯಾಗುತ್ತಿತ್ತು.
ಆದರೆ ಇನ್ನು 5 ಕೆಜಿ ಅಕ್ಕಿ ಜೊತೆಗೆ ಇನ್ನುಳಿದ 5 ಕೆಜಿ ಬಾಬ್ತು ಹಣದ ಬದಲಾಗಿ ಆಹಾರ ಕಿಟ್ ಸಿಗಲಿದೆ. ಸರ್ಕಾರ ಈಗಾಗಲೇ ಹಣದ ಬದಲು ಬೇಳೆ, ಎಣ್ಣೆ, ಸಕ್ಕರೆ ನೀಡುವ ಬಗ್ಗೆ ಸುಳಿವು ನೀಡಿತ್ತು. ಇದೀಗ ಅದು ಕನ್ ಫರ್ಮ್ ಆಗಿದ್ದು ಆಹಾರ ಕಿಟ್ ಒದಗಿಸುವ ಬಗ್ಗೆ ಸ್ವತಃ ಆಹಾರ ಖಾತೆ ಸಚಿವ ಕೆಎಚ್ ಮುನಿಯಪ್ಪನವರೇ ಖಚಿತಪಡಿಸಿದ್ದಾರೆ.
ಅಕ್ಟೋಬರ್ 28 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ಪಡೆಯಲಾಗುತ್ತದೆ. ಅದಾದ ಬಳಿಕ ಅನ್ನಭಾಗ್ಯ ಅಕ್ಕಿ ಜೊತೆಗೆ ಎಣ್ಣೆ, ಬೇಳೆಯನ್ನೊಳಗೊಂಡ ಆಹಾರ ಕಿಟ್ ಬಗ್ಗೆ ಘೋಷಣೆ ಮಾಡಲಾಗುತ್ತದೆ. ಇದರಿಂದಾಗಿ ಅಕ್ಕಿ ಬದಲಿಗೆ ನೀಡುವ ಹಣ ಕ್ರೆಡಿಟ್ ಆಗುವುದು ಬಂದ್ ಆಗಲಿದ್ದು ಅದರ ಬದಲಿಗೆ ಆಹಾರ್ ಕಿಟ್ ಸಿಗುವಂತಾಗಲಿದೆ.