ಅದು ಮಧ್ಯಾರಾತ್ರಿಯ ಸಮಯ.ಶೌಚಾಲಯಕ್ಕೆ ತೆರಳಿದ್ದ ಇಬ್ಬರು 1 ಕೋಟಿ ಮೌಲ್ಯದ ಚಿನ್ನದ ಜೊತೆಗೆ ಹೋಗಿದ್ರು.ಪೊಲೀಸ್ ಸೋಗಿನಲ್ಲಿ ಬಂದ ಮತ್ತಿಬ್ಬರು ಇದನ್ನೇ ಸರಿಯಾದ ಸಮಯ ಅಂತಾ ಅನ್ಕೊಂಡಿದ್ರು.ಆಟೋದಲ್ಲಿ ಕರೆದೊಯ್ದ ಆಸಾಮಿಗಳು ಎರಡು ಕೆಜಿ ಚಿನ್ನದ ಗಟ್ಟಿ ಜೊತೆಗೆ ಪರಾರಿಯಾಗಿದ್ದಾರೆ.ಸಿಲಿಕಾನ್ ಸಿಟಿ ಬೆಂಗಳೂರಿನ ಸಣ್ಣ ಸಣ್ಣ ಗಲ್ಲಿಯಲ್ಲೂ ಕೂಡ ಕೋಟಿ ಕೋಟಿ ಮೌಲ್ಯದ ವ್ಯವಹಾರ ನಡೆಯುತ್ತೆ.ಕೆಲವರು ಕಷ್ಟ ಪಟ್ಟು ದುಡಿದ್ರೆ ಇನ್ನು ಕೆಲವರು ಕಂಡವರ ಹಣದ ಮೇಲೆ ಕಣ್ಣಿಟ್ಟಿರ್ತಾರೆ.ಸರಿಯಾದ ಸಮಯ ನೋಡಿಕೊಂಡು ಕನ್ನ ಹಾಕ್ತಾರೆ.ಇಲ್ಲಾಗಿರೋದು ಕೂಡ ಇದೇ.ಪೊಲೀಸ್ ಸೋಗಿನಲ್ಲಿ ಬಂದ ಖದೀಮರು ಎರಡು ಕೆಜಿ ಚಿನ್ನದ ಜೊತೆ ಪರಾರಿಯಾಗಿದ್ದಾರೆ.
ತನಗಾದ ನೋವನ್ನ ತೋಡಿಕೊಳ್ತಿರೊ ಯುವಕನ ಹೆಸರು ಅಬ್ದುಲ್ ರಜಾಕ್.ರಾಯಚೂರು ಮೂಲದ ಉದ್ಯಮಿ ಖಾದಿರ್ ಪಾಷ ಬಳಿ ಕೆಲಸ ಮಾಡಿಕೊಂಡಿದ್ದಾನೆ.ಚಿನ್ನದ ಬ್ಯುಸಿನೆಸ್ ಮಾಡಿಕೊಂಡಿದ್ದ ಖಾದಿರ್ ಪಾಷ ಬೆಂಗಳೂರು ಸಂಪರ್ಕ ಹೊಂದಿದ್ದ.ರಾಯಚೂರಿನಿಂದ ಹಣ ಕೊಟ್ಟು ಕಳಿಸ್ತಿದ್ದ ಉದ್ಯಮಿ ಬೆಂಗಳೂರಿನಿಂದ ಚಿನ್ನದ ಗಟ್ಟಿ ತರಿಸಿಕೊಳ್ತಿದ್ದ.ಅದ್ರಂತೆ ಅಬ್ದುಲ್ ರಜಾಕ್,ಮಲ್ಲಯ್ಯ,ಸುನೀಲ್ ಕುಮಾರ್ ಎಂಬುವವರಿಗೆ ಮಾರ್ಚ್ 10 ರಂದು ಒಟ್ಟು 1 ಕೋಟಿ 12 ಲಕ್ಷ ಕೊಟ್ಟು ಬಸ್ ಟಿಕೆಟ್ ಬುಕ್ ಮಾಡಿ ಬೆಂಗಳೂರಿನಿಂದ ಚಿನ್ನದ ಗಟ್ಟಿ ತರುವಂತೆ ಕಳಿಸಿದ್ದ.ಮಾರ್ಚ್ 11 ರಂದು ರಾಜಾ ಮಾರ್ಕೆಟ್ ನಲ್ಲಿ ಚಿನ್ನದ ಗಟ್ಟಿ ಖರೀದಿಸಿದ್ದ ಮೂವರು ವಾಪಸ್ಸು ರಾಯಚೂರಿಗೆ ತೆರಳಲು ಮುಂದಾಗಿದ್ರು.ಅದ್ರಂತೆ ಮಾರ್ಚ್ 11 ರಂದು 11 ಗಂಟೆಗೆ ಬಸ್ ಟಿಕೆಟ್ ಬುಕ್ ಆಗಿತ್ತು.ಇನ್ನೇನು ಬಸ್ ಹತ್ತಿ ರಾಯಚೂರು ತೆರಳಬೇಕಿತ್ತು ಅಲ್ಲೇ ಸಿಕ್ಕಿದ್ದು ನೋಡಿ ಟ್ವಿಸ್ಟ್.
ಖಾದಿರ್ ಪಾಷ ಸಂಬಂಧಿ ಹೀಗಿರ್ಬೇಕಾದ್ರೆ ಸುನೀಲ್ ಕುಮಾರ್ ನನ್ನ ಗ್ರೀನ್ ಲೈನ್ ಟ್ರಾವೆಲ್ ಕಚೇರಿಯಲ್ಲಿ ಕೂರಿಸಿ ಅಬ್ದುಲ್ ರಜಾಕ್ ಮತ್ತು ಮಲ್ಲಯ್ಯ ಶೌಚಾಲಯಕ್ಕೆ ಅಂತಾ ಚಿನ್ನದ ಗಟ್ಟಿ ಇದ್ದ ಬ್ಯಾಗ್ ನನ್ನ ತೆಗೆದುಕೊಂಡು ಬಂದಿದ್ದಾರೆ.ಅಲ್ಲಿಗೆ ಬಂದ ಇಬ್ಬರು ಆಸಾಮಿ ಗಳು ನಾವು ಪೊಲೀಸರು.ಮೂರು ತಿಂಗಳಿಂದ ನಿಮ್ಮನ್ನ ಗಮನಿಸ್ತಿದ್ದೀವಿ. ಅಕ್ರಮ ದಂಧೆ ಮಾಡ್ತಿದ್ದಿರಾ ಅಂತಾ ಆಟೋದಲ್ಲಿ ಕೂರಿಸಿಕೊಂಡಿದ್ದಾರೆ.ನಂತರ ಮಲ್ಲಯ್ಯನನ್ನ ರೇಸ್ ಕೋರ್ಸ್ ರಸ್ತೆ ಬಳಿ ಇರುವ ಕಾಂಗ್ರೆಸ್ ಕಚೇರಿ ಬಳಿ ಬಿಟ್ಟು..ಅಬ್ದುಲ್ ರಜಾಕ್ ನನ್ನ ಚೌಡಯ್ಯ ರಸ್ತೆಯಲ್ಲಿರುವ ನೆಹರು ತಾರಾಲಯ ಹತ್ತಿರ ಇಳಿಸಿ 2 ಕೆಜಿ 200 ಗ್ರಾಂ ಚಿನ್ನದ ಗಟ್ಟಿ ಮತ್ತು 19 ಸಾವಿರ ನಗದು ಜೊತೆಗೆ ಪರಾರಿಯಾಗಿದ್ದಾರೆ.ಇನ್ನೂ ಘಟನೆ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ತನಿಖೆಗೆ ಇಳಿದ ಪೊಲೀಸರು ಸಿಸಿಟಿವಿ ದೃಶ್ಯ ಪರಿಶೀಲಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.ಅಲ್ಲದೇ ಚಿನ್ನದ ಗಟ್ಟಿ ಖರೀದಿ ಮಾಡಿದ್ದ ಹಣ ಕಾಸಿನ ವ್ಯವಹಾರದ ಬಗ್ಗೆಯೂ ದೂರುದಾರರ ಬಳಿ ಮಾಹಿತಿ ಪಡೆದುಕೊಳ್ತಿದ್ದಾರೆ.