Select Your Language

Notifications

webdunia
webdunia
webdunia
webdunia

ಕುಸಿತ ಕಂಡ ಬಂಗಾರದ ಬೆಲೆ

ಕುಸಿತ ಕಂಡ ಬಂಗಾರದ ಬೆಲೆ
bangalore , ಶನಿವಾರ, 12 ಮಾರ್ಚ್ 2022 (19:09 IST)
ನಿನ್ನೆ ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 49,800 ರೂ. ಇದ್ದುದು ಇಂದು 48,200 ರೂ.ಗೆ ಕುಸಿತವಾಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 54,330 ರೂ. ಇದ್ದುದು 52,580 ರೂ. ಆಗಿದೆ.ಇನ್ನೇನು ಮದುವೆ ಸೀಸನ್ ಶುರುವಾಗಿದೆ. ಮೇ ಅಂತ್ಯದವರೆಗೂ ಇನ್ನು ಶುಭ ಸಮಾರಂಭಗಳದ್ದೇ ಕಾರುಬಾರು. ಹೀಗಾಗಿ, ನೀವೇನಾದರೂ ಚಿನ್ನ ಖರೀದಿಸಲು ಯೋಚಿಸಿದ್ದರೆ ಅದಕ್ಕೆ ಇದು ಸಕಾಲ. ಯಾಕೆಂದರೆ ಒಂದೇ ದಿನದಲ್ಲಿ 10 ಗ್ರಾಂ ಚಿನ್ನಕ್ಕೆ 1,750 ರೂ. ಕುಸಿತವಾಗಿದೆ. ಭಾರತದಲ್ಲಿ ಬೆಳ್ಳಿಯ ಬೆಲೆ ಕೂಡ (Silver Price) ನಿನ್ನೆಗಿಂತಲೂ ಇಂದು 1,800 ರೂ. ಇಳಿಕೆ ಕಂಡಿದೆ. ಹೀಗಾಗಿ ಬಂಗಾರ ಖರೀದಿಸಲು ಬಯಸುವವರಿಗೆ ಇದು ಸರಿಯಾದ ಸಮಯ. ಹೈದರಾಬಾದ್, ಕೊಲ್ಕತ್ತಾ, ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿ ಸೇರಿ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.
 
ಚಿನ್ನದ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾಗಿರುವ ರಷ್ಯಾ ಮೇಲಿನ ನಿರ್ಬಂಧಗಳಿಂದಾಗಿ ಆಮದು ಕಡಿಮೆಯಾಗುವ ಭೀತಿಯೂ ಚಿನ್ನದ ಬೆಲೆಯ ಹೆಚ್ಚಳಕ್ಕೆ ಕಾರಣವಾಗಿದೆ. ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ರಷ್ಯಾ- ಉಕ್ರೇನ್ ಯುದ್ಧ ಕೂಡ ಕಾರಣ ಎನ್ನಲಾಗಿದೆ. ಚಿನ್ನದ ಬೆಲೆ ಏರಿಕೆಯಾಗುತ್ತಿದ್ದರೆ ಬೆಳ್ಳಿ ಬೆಲೆ (Silver Price) ಇಳಿಮುಖವಾಗಿದೆ.ಭಾರತದ ಅನೇಕ ನಗರಗಳಲ್ಲಿ ನಿನ್ನೆ ಕೊಂಚ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಭಾರೀ ಕುಸಿತವಾಗಿದೆ. ನಿನ್ನೆ ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 49,800 ರೂ. ಇದ್ದುದು ಇಂದು 48,200 ರೂ.ಗೆ ಕುಸಿತವಾಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 54,330 ರೂ. ಇದ್ದುದು 52,580 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ.
 
ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,850 ರೂ. ಮುಂಬೈ- 48,200 ರೂ, ದೆಹಲಿ- 48,200 ರೂ, ಕೊಲ್ಕತ್ತಾ- 48,200 ರೂ, ಬೆಂಗಳೂರು- 48,200 ರೂ, ಹೈದರಾಬಾದ್- 48,200 ರೂ, ಕೇರಳ- 48,200 ರೂ, ಪುಣೆ- 48,250 ರೂ, ಮಂಗಳೂರು- 48,200 ರೂ, ಮೈಸೂರು- 48,200 ರೂ. ಇದೆ.
 
ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 53,290 ರೂ, ಮುಂಬೈ- 52,580 ರೂ, ದೆಹಲಿ- 52,580 ರೂ, ಕೊಲ್ಕತ್ತಾ- 52,580 ರೂ, ಬೆಂಗಳೂರು- 52,580 ರೂ, ಹೈದರಾಬಾದ್- 52,580 ರೂ, ಕೇರಳ- 52,580 ರೂ, ಪುಣೆ- 52,630 ರೂ, ಮಂಗಳೂರು- 52,580 ರೂ, ಮೈಸೂರು- 52,580 ರೂ. ಇದೆ.
 
ಇಂದಿನ ಬೆಳ್ಳಿಯ ದರ:
ಬೆಳ್ಳಿ ಬೆಲೆಯಲ್ಲಿ ನಿನ್ನೆಗಿಂತ ಇಂದು ಭಾರೀ ಕುಸಿತವಾಗಿದೆ. ನಿನ್ನೆಗಿಂತ ಇಂದು 1 ಕೆಜಿ ಬೆಳ್ಳಿಗೆ 1,800 ರೂ. ಕುಸಿತವಾಗಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿ ದರ 71,200 ರೂ. ಇದ್ದುದು 69,400 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 74,100 ರೂ, ಮೈಸೂರು- 74,100 ರೂ., ಮಂಗಳೂರು- 74,100 ರೂ., ಮುಂಬೈ- 69,400 ರೂ, ಚೆನ್ನೈ- 74,100 ರೂ, ದೆಹಲಿ- 69,400 ರೂ, ಹೈದರಾಬಾದ್- 74,100 ರೂ, ಕೊಲ್ಕತ್ತಾ- 69,400 ರೂ. ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಮ್ಮು ಕಾಶ್ಮೀರದಲ್ಲಿ ಮೂರು ಪ್ರತ್ಯೇಕ ಎನ್​ಕೌಂಟರ್: ನಾಲ್ವರು ಉಗ್ರರ ಸಾವು