Select Your Language

Notifications

webdunia
webdunia
webdunia
Wednesday, 16 April 2025
webdunia

ಕಾರದಪುಡಿ ಎರಚಿ ಹಾಡಹಗಲೇ ಸರಗಳ್ಳತನ, ಮುಂದುವರೆದು ಸರಗಳ್ಳತನ ಪ್ರಕರಣಗಳು

bangalore
bangalore , ಸೋಮವಾರ, 12 ಜುಲೈ 2021 (20:39 IST)
ಹಾಡಹಗಲೇ ಅಂಗಡಿಯ ವ್ಯಾಪಾರಿ ಮಹಿಳೆ ಮೇಲೆ ಕಾರದ ಪುಡಿ ಎರಚಿ ಸರಗಳ್ಳತನಾದ ಘಟನೆ ನಡೆದಿದೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ದಕ್ಷಿಣಕಾಶಿ ಶಿವಗಂಗೆಯಲ್ಲಿನ, ನಂದಿನಿ‌ ಪಾರ್ಲರ್ ಮಾಲೀಕ ಮಹಿಳೆಯ ಸರಕಳವಾಗಿದೆ, ಸುಮಾರು 2 ಲಕ್ಷ ಬೆಲೆಬಾಳುವ 60 ಗ್ರಾಂ ಚಿನ್ನದ ಸರ ಕಳವಾಗಿದ್ದು, ನಂದಿನಿ ಪಾರ್ಲರ್ ನಲ್ಲಿ‌ ಕಾರ್ಯ ನಿರ್ವಹಿಸುತ್ತಿದ್ದ ವಸಂತ ಕುಮಾರಿ (45) ಎಂಬ ಮಹಿಳೆಯ ಸರ ಕಳವಾಗಿದೆ. ಇನ್ನೂ ಘಟನಾ ಸ್ಥಳಕ್ಕೆ ಸಿಪಿಐ ಹರೀಶ್ ಸ್ಥಳ ಭೇಟಿ ನಡೆಸಿ ತನಿಖೆ ಕೈಗಿತ್ತುಕೊಂಡಿದ್ದಾರೆ. ಘಟನೆ ಸಂಬಂಧ ಡಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಶ್ರೀ ಕ್ಷೇತ್ರ ಶಿವಗಂಗೆಯಲ್ಲಿ‌ ಪೊಲೀಸರ ಸಂಖ್ಯೆ ಹೆಚ್ಚಿಸಬೇಕು ಹಾಗೂ ಪೊಲೀಸ್ ಗಸ್ತು ಹೆಚ್ಚಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ಬಾರಿ ಬಾದಾಮಿಯಿಂದಲೇ ಸ್ಪರ್ಧೆ: ಸಿದ್ದರಾಮಯ್ಯ