Select Your Language

Notifications

webdunia
webdunia
webdunia
webdunia

ತುಳುನಾಡಿನ ದೈವ, ದೇವರ ಮೊರೆ ಹೋದ ಹೆಚ್‌ಡಿಡಿ

ತುಳುನಾಡಿನ ದೈವ, ದೇವರ ಮೊರೆ ಹೋದ ಹೆಚ್‌ಡಿಡಿ
ಮಂಗಳೂರು , ಮಂಗಳವಾರ, 2 ಮೇ 2023 (09:27 IST)
ಮಂಗಳೂರು : ರಾಜ್ಯದಲ್ಲಿ ಚುನಾವಣಾ ಕಾವು ಹೆಚ್ಚಾಗುತ್ತಿದ್ದು ಯಾರು ಶಾಸಕರಾಗುತ್ತಾರೆ, ಯಾವ ಪಕ್ಷಕ್ಕೆ ಬಹುಮತ ಬರುತ್ತೆ ಅನ್ನೋ ಲೆಕ್ಕಾಚಾರ ನಡೆಯುತ್ತಿದೆ.
 
ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಹೆಚ್ಡಿ ದೇವೆಗೌಡ ಮಾತ್ರ ಈ ಬಾರಿ ತನ್ನ ಮಗನನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಬೇಕೆಂಬ ಛಲದಲ್ಲಿ ಇದ್ದಾರೆ. ಇದಕ್ಕೆಲ್ಲ ದೈವಬಲ ಬೇಕೆಂಬ ಕಾರಣಕ್ಕಾಗಿ ಇದೀಗ ದೈವ ದೇವರ ನೆಲೆಬೀಡು ಪರಶುರಾಮ ಸೃಷ್ಟಿಯ ತುಳುನಾಡಿನ ಮಣ್ಣಿಗೆ ಮಣ್ಣಿನ ಮಗ ಕಾಲಿಟ್ಟಿದ್ದಾರೆ.

ಮಂಗಳೂರು ಸೇರಿದಂತೆ ಕರಾವಳಿಯಲ್ಲಿ ಜೆಡಿಎಸ್ಗೆ ನೆಲೆ ಇಲ್ಲದಿದ್ದರೂ ಇಲ್ಲಿ ಕೆಲವು ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಜೆಡಿಎಸ್ ವರಿಷ್ಠ ದೇವೇಗೌಡ ಇಲ್ಲಿನ ದೈವ ದೇವರ ಮೊರೆ ಹೋಗಿದ್ದಾರೆ. ತನ್ನ ಮಗನನ್ನು ಈ ಬಾರಿ ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ಮಾಡಿಸುವಂತೆ ದೈವ ದೇವರಲ್ಲಿ ಪ್ರಾರ್ಥಿಸಲು ಮಂಗಳೂರಿಗೆ ಬಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಕಲ್ಲು ತೂರಾಟ