Publish Date: Thu, 28 Sep 2023 (13:06 IST)
Updated Date: Thu, 28 Sep 2023 (11:13 IST)
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ತಮಿಳುನಾಡಿಗೆ ಹೋಗಿ ಎಂದು ಮಾಜಿ ಸಚಿವ ಸಿ.ಟಿ ರವಿ ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಕಾವೇರಿ ನದಿ ನೀರು ವಿವಾದ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯನವರೇ ಸ್ಟಾಲಿನ್‍ಗೂ ನಿಮಗೂ ಸಂಬಂಧ ಚೆನ್ನಾಗಿದೆ. ನೀವು, ಡಿಕೆ ಶಿವಕುಮಾರ್ ಇಬ್ಬರೂ ತಮಿಳುನಾಡಿಗೆ ಹೋಗಿ. ಅಲ್ಲಿ ಸ್ಟಾಲಿನ್ ಭೇಟಿ ಮಾಡಿ ರಾಜ್ಯದ ಜನರ ಕಷ್ಟ ವಿವರಿಸಿ. ನೀವು ಕುರುವೈ ಬೆಳೆಗೆ ನೀರು ಕೇಳ್ತಿದ್ದೀರಿ, ಇಲ್ಲಿ ನಮಗೆ ಕುಡಿಯೋಯಲು ನೀರಿಲ್ಲ. ಇದರಿಂದ ನಿಮಗೆ ತಾನೇ ರಾಜಕೀಯ ಲಾಭ ಆಗೋದು ಎಂದು ಕಿಡಿಕಾರಿದ್ದಾರೆ.