Publish Date: Fri, 19 May 2023 (13:31 IST)
Updated Date: Fri, 19 May 2023 (13:39 IST)
ಪಂಚಮಸಾಲಿ ಮುಖಂಡ ವಿಜಯಾನಂದ ಕಾಶಪ್ಪನವರಿಗೆ ಡಿಸಿಎಂ ಸ್ಥಾನ ನೀಡಬೇಕೆಂದು ಆಗ್ರಹಿಸಿದ್ದಾರೆ.ಗದಗನಲ್ಲಿ ಪಂಚಮಸಾಲಿ ಸಮುದಾಯದ ಮುಖಂಡ ಕೊಟ್ರಗೌಡ ಪಾಟೀಲ ಸುದ್ದಿಗೋಷ್ಠಿ ನಡಸಿ, ಪಂಚಮಸಾಲಿ ಸಮುದಾಯಕ್ಕೆ ಡಿಸಿಎಂ ಸ್ಥಾನ ನೀಡವಂತೆ ಒತ್ತಾಯಿಸಿದ್ದಾರೆ.. ಕಳೆದ ಎರಡುವರೆ ವರ್ಷ ವಿಜಯಾನಂದ ಕಾಶಪ್ಪನವರ್ 2ಎ ಮೀಸಲಾತಿ ಹೋರಾಟ ನಡೆಸಿದ್ದಾರೆ.ಅವರ ಹೋರಾಟದ ಫಲವಾಗಿ ಕಾಂಗ್ರೆಸ್ ಉತ್ತರ ಕರ್ನಾಟಕದಲ್ಲಿ ಹೆಚ್ಚು ಸ್ಥಾನಗಳನ್ನು ಪಡೆದಿದೆ.. ಪಂಚಮಸಾಲಿ ಸಮುದಾಯಕ್ಕೆ ಡಿಸಿಎಂ ಹಾಗೂ 4-5 ಸಚಿವ ಸ್ಥಾನಗಳನ್ನು ನೀಡಲು ಮನವಿ ಮಾಡಿಕೊಂಡಿದ್ದಾರೆ