ರಾಜ್ಯದಲ್ಲಿರುವ ಎಲ್ಲ ಸಕ್ಕರೆ ಕಾರ್ಖಾನೆಗಳು ಉಪ ಉತ್ಪಾದನೆಗಳನ್ನು ಸಿದ್ಧಪಡಿಸಿದ ಅದರಿಂದ ಬರುವ ಲಾಭಾಂಶವನ್ನು ನೇರವಾಗಿ ರೈತರಿಗೆ ಕೊಡುವಂತೆ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಮನವಿ ಮಾಡಲಾಗಿದೆ ಎಂದು ಜವಳಿ, ಕೈಮಗ್ಗ ಮತ್ತು ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ತಿಳಿಸಿದ್ದಾರೆ.ರಾಜ್ಯದ ಸಕ್ಕರೆ ಕಾರ್ಖಾನೆಗಳು ಉತ್ಪಾದಿಸುವ ಎಥನಾಲ್ ಅನ್ನು ಆದಾಯ ಹಂಚಿಕೆ ಸೂತ್ರದ ವ್ಯಾಪ್ತಿಗೆ ಒಳಪಡಿಸುವ ಬಗ್ಗೆ ಚರ್ಚಿಸಲು ಇಂದು ರಾಜ್ಯದಲ್ಲಿ ಎಥನಾಲ್ ಘಟಕಗಳನ್ನು ಹೊಂದಿರುವ ಸಕ್ಕರೆ ಕಾರ್ಖಾನೆಗಳ ಅಧ್ಯಕ್ಷರು ಮಾಲೀಕರ ಜತೆ ವಿಕಾಸಸೌಧದ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.. ಸಕ್ಕರೆ ಕೈಗಾರಿಕೆಗಳ ಉಪ ಉತ್ಪನ್ನದ ಲಾಭಾಂಶದ ಹಣವನ್ನು ರೈತರಿಗೆ ನೀಡಬೇಕು ಅನ್ನೋ ಮನವಿಯನ್ನು ನಾವು ಕಾರ್ಖಾನೆಗಳ ಬಳಿ ಮಾಡಿದ್ದೇವೆ.ಇನ್ನು ಕಬ್ಬಿನಲ್ಲಿ ತೂಕ ಕಡಿಮೆ ಇದೆ ಎಂದು ಹೇಳಿ ಇಳುವರಿ ಕಡಿಮೆ ತೋರಿಸುವಂತಿಲ್ಲ. ಈ ಬಗ್ಗೆ ಎಲ್ಲ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಸೂಚನೆ ನೀಡಲಾಗಿದೆ. ಒಂದು ವೇಳೆ ಇಂತಹ ಘಟನೆ ನಡೆದರೆ ಕಾರ್ಖಾನೆ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ಕೊಡಲಾಗಿದೆ ಎಂದು ತಿಳಿಸಿದರು