Select Your Language

Notifications

webdunia
webdunia
webdunia
webdunia

ಮಾತೃಭಾಷೆಯಲ್ಲೇ ವಿದ್ಯಾಭ್ಯಾಸ: ವೆಂಕಯ್ಯ ನಾಯ್ಡು

ಮಾತೃಭಾಷೆಯಲ್ಲೇ ವಿದ್ಯಾಭ್ಯಾಸ: ವೆಂಕಯ್ಯ ನಾಯ್ಡು
Bangalore , ಸೋಮವಾರ, 12 ಡಿಸೆಂಬರ್ 2016 (11:45 IST)
ಮಾಧ್ಯಮಗಳು ಸತ್ಯ ಮತ್ತು ವಿಶ್ವಾಸಾರ್ಹ ಸಂಗತಿಗಳನ್ನು ಪ್ರಸಾರ ಮಾಡಲು ಒತ್ತು ನೀಡುವುದರೊಂದಿಗೆ ಆಯಾ ಭಾಗದ ಕಲೆ, ಸಾಹಿತ್ಯ, ಸಂಸ್ಕೃಂತಿ, ಪರಂಪರೆ ಹಾಗೂ ಮೌಲ್ಯಗಳನ್ನು ಕಾಪಾಡಬೇಕೆಂದು ಕೇಂದ್ರ ವಾರ್ತಾ ಮತ್ತು ಪ್ರಸಾರ, ನಗರಾಭಿವೃದ್ಧಿ, ವಸತಿ ಹಾಗೂ ಬಡತನ ನಿರ್ಮೂಲನಾ ಖಾತೆ ಸಚಿವ ಎಂ. ವೆಂಕಯ್ಯ ನಾಯ್ಡು ಹೇಳಿದರು. 
 
ಅವರು ರವಿವಾರ ಕಲಬುರಗಿಯಲ್ಲಿ ಗುಲಬರ್ಗಾ ಆಕಾಶವಾಣಿ ಕೇಂದ್ರದ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಭಾಷೆ, ಭಾವನೆ ಮತ್ತು ಸಂಸ್ಕøತಿ ಇವು ಪರಸ್ಪರ ಅವಿನಾಭಾವ ಸಂಬಂಧ ಹೊಂದಿದ್ದು, ಇವುಗಳನ್ನು ಉಳಿಸಿ ಬೆಳೆಸುವ ಕಾರ್ಯ ಮಾಧ್ಯಮಗಳಿಂದ ಆಗಬೇಕಾಗಿದೆ. ಅಂತರಾಳದಿಂದ ಬರುವ ಮಾತೃಭಾಷೆಯಲ್ಲಿಯೇ ಮಕ್ಕಳಿಗೆ ವಿದ್ಯಾಭ್ಯಾಸ ಕಲಿಸಬೇಕಲ್ಲದೇ ಮಾತೃಭಾಷೆಯನ್ನು ಸದಾ ಪ್ರೀತಿಸಬೇಕು ಎಂದರು. 
 
ಈ ಭಾಗದಲ್ಲಿ ಶರಣರ, ಸೂಫಿ ಸಂತರ, ಸಿಖ್, ಬುದ್ಧ, ಜೈನ್ ಸಂಸ್ಕೃಂತಿಯು ಬೆಳೆದು ಬಂದಿದೆ. ವಿವಿಧ ಸಾಮ್ರಾಜ್ಯಗಳ ಆಳ್ವಿಕೆಗೆ ಒಳಪಟ್ಟ ಈ ಭಾಗ ವಿವಿಧ ಭಾಷಾ ಸಂಸ್ಕøತಿ, ಅತ್ಯಂತ ಶ್ರೀಮಂತ ನೈಸರ್ಗಿಕ ಸಂಪನ್ಮೂಲ ಹಾಗೂ ಅನೇಕ ಐತಿಹಾಸಿಕ ತಾಣಗಳನ್ನು ಹೊಂದಿದೆ. ಕಲಬುರಗಿ ಆಕಾಶವಾಣಿ ಕೇಂದ್ರವು ಕಳೆದ 50 ವರ್ಷಗಳ ಅವಧಿಯಲ್ಲಿ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಹೆಚ್ಚಿಸುವ ಹಾಗೂ ಜನರ ವಿಶ್ವಾಸಾರ್ಹತೆ ಪಡೆಯುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿರುವುದು ಶ್ಲಾಘನೀಯವಾಗಿದೆ ಎಂದರು. 
 
ಕಲಬುರಗಿ ನಗರವನ್ನು ಸ್ಮಾರ್ಟ್ ಸಿಟಿಯನ್ನಾಗಿ ಘೋಷಣೆ ಮಾಡುವ ಸಂಬಂಧ ಇರುವ ಮಾನದಂಡಗಳನ್ನು ಪೂರೈಸುವ ಮೂಲಕ ಅರ್ಹತೆ ಪಡೆಯುವುದು ಅವಶ್ಯಕವಾಗಿದೆ. ಆದರೂ ಈ ಕುರಿತು ಸಕಾರಾತ್ಮಕವಾಗಿ ಪ್ರಯತ್ನಿಸುವುದಾಗಿ ಹೇಳಿದರಲ್ಲದೇ ಈ ಭಾಗದಲ್ಲಿ ಜಾರಿಗೊಂಡ 371(ಜೆ) ಅನ್ವಯ ಅಭಿವೃದ್ಧಿ ಕಾರ್ಯಗಳಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜೊತೆಯಾಗಿ ಕೆಲಸ ಕಾರ್ಯಗಳನ್ನು ಕೈಗೊಳ್ಳಬೇಕಾಗಿದೆ ಎಂದರು. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಯುವಕನಿಂದ ಯುವಕನಿಗೆ ಲೈಂಗಿಕ ದೌರ್ಜನ್ಯ