Publish Date: Tue, 05 Sep 2017 (22:12 IST)
Updated Date: Tue, 05 Sep 2017 (22:22 IST)
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಶಾಕಿಂಗ್ ನ್ಯೂಸ್ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಗೌರಿ ಲಂಕೇಶ್ ಹತ್ಯೆ ಬಗ್ಗೆ ಸಿಎಂ ಅತೀವ ದುಃಖ, ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
ಪತ್ರಕರ್ತೆಯಾಗಿದ್ದರೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಅನ್ಯಾಯವನ್ನ ಖಂಡಿಸುತ್ತಿದ್ದರು. ಹೋರಾಟ ನಡೆಸುತ್ತಿದ್ದರು. ನಕ್ಸಲರನ್ನ ಶರಣಾಗತಿ ಮಾಡಿಸಿ ಮುಖ್ಯವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತಂದೆ ಲಂಕೆಶ್ ನಡೆಸುತ್ತಿದ್ದ ಲಂಕೇಶ್ ಪತ್ರಿಕೆಯನ್ನ ಮುಂದುವರೆಸಿಕೊಂಡು ಬಂದಿದ್ದರು ಎಂದು ಸಿಎಂ ಹೇಳಿದ್ದಾರೆ.
ಹಲವು ಬಾರಿ ಗೌರಿ ಲಂಕೇಶ್ ನನ್ನನ್ನ ಭೇಟಿ ಮಾಡಿದ್ದರು. ಆದರೆ, ಬೆದರಿಕೆ ಇರುವ ಬಗ್ಗೆಯಾಗಲಿ, ಭದ್ರತೆ ನೀಡುವ ಬಗ್ಗೆಯಾಗಲಿ ಯಾವುದೇ ಪ್ರಸ್ತಾಪ ಮಾಡಿರಲಿಲ್ಲ. ಭದ್ರತೆ ಕೇಳಿದ್ದರೆ ಸರ್ಕಾರ ಖಂಡಿತಾ ಭದ್ರತೆ ನೀಡುತ್ತಿತ್ತು. ಗೌರಿ ಲಂಕೇಶ್ ಹತ್ಯೆ ತನಿಖೆಗೆ ಪೊಲೀಸರು 3 ತಂಡಗಳನ್ನ ರಚಿಸಿದ್ದಾರೆ. ತೀವ್ರಗತಿಯಲ್ಲಿ ತನಿಖೆ ನಡೆಸುವಂತೆ ಸೂಚಿಸಿರುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ