Publish Date: Wed, 06 Sep 2017 (15:29 IST)
Updated Date: Wed, 06 Sep 2017 (15:34 IST)
ಪತ್ರಕರ್ತೆ ಗೌರಿ ಲಂಕೇಶ್ ಸಾವಿಗೆ ಮಾಜಿ ಪತಿ ದೊಡ್ಡಬಳ್ಳಾಪುರದ ರಾಜಘಟ್ಟ ಮೂಲದ ಚಿದಾನಂದ್ ರಾಜಘಟ್ಟ ಸಂತಾಪ ಸೂಚಿಸಿದ್ದಾರೆ. ಅಮೆರಿಕದಲ್ಲಿರುವ ಅವರು ಫೇಸ್ಬುಕ್ ಮೂಲಕ ಗೌರಿ ಲಂಕೇಶ್ ಅವರಿಗೆ ಸಂತಾಪ ಸೂಚಿಸಿದ್ದಾರೆ.
ತಮ್ಮ ಸಂತಾಪ ಸೂಚಕದ ವೇಳೆ ಗೌರಿ ಲಂಕೇಶ್ ಅವರ ವೈಚಾರಿಕತೆಯನ್ನ ಶ್ಲಾಘಿಸಿರುವ ಮಾಜಿ ಪತಿ, ಘನತೆ, ಸಮಗ್ರತೆ ನಿರ್ಭೀತಿಯ ಕೆಲಸಗಳು ಮುಂದುವರೆಯುತ್ತವೆ ಎಂದು ಅವರು ಹೇಳಿದ್ಧಾರೆ. ಗೌರಿ ಲಂಕೇಶ್ ಅವರ ವೈಚಾರಿಕತೆ ಎಂದೆಂದಿಗೂ ಅಜರಾಮರ ಎಂದು ಅವರು ಹೇಳಿದ್ಧಾರೆ.
ಗೌರಿ ಲಂಕೇಶ್ ಹತ್ಯೆ ಬಗ್ಗೆ ಇಡೀ ವಿಶ್ವದ ಪತ್ರಕರ್ತರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಅಮೆರಿಕ, ಬ್ರಿಟನ್ ಪತ್ರಿಕೆಗಳು ಈ ಘಟನೆಯನ್ನ ತೀವ್ರವಾಗಿ ಖಂಡಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ