ಗೌರಿ, ಗಣೇಶ ಹಬ್ಬ, ವಾರಾಂತ್ಯದ ದಿನಗಳು ಒಟೊಟ್ಟಿಗೆ ಬಂದಿರುವುದರಿಂದ ರಜಾವಧಿಯಲ್ಲಿ ಊರಿಗೆ, ಪ್ರವಾಸಕ್ಕೆ ಹೋಗುವವರಿಗೆ ಖಾಸಗಿ ಬಸ್‌ಗಳ ದರ ದುಬಾರಿ ಆಗಿದೆ. ಶನಿವಾರ, ಭಾನುವಾರ ಜೊತೆಗೆ ಇರುವುದರಿಂದ ಶುಕ್ರವಾರ ಊರಿಗೆ ಹೊರಡುವವರ ಸಂಖ್ಯೆ ಹೆಚ್ಚಾಗಿದೆ. ಗುರುವಾರ, ಶುಕ್ರವಾರ ಮತ್ತು ಶನಿವಾರ ಈ ಮೂರು ದಿನಗಳಲ್ಲಿ ಬೆಂಗಳೂರಿನಿಂದ ಹೊರ ಜಿಲ್ಲೆಗಳಿಗೆ ಹೋಗುವವರಿಗೆ, ಮಂಗಳವಾರ ಬುಧವಾರ ಬೆಂಗಳೂರಿಗೆ ವಾಪಸ್ ಆಗುವವರಿಗೆ ಖಾಸಗಿ ಬಸ್‌ಗಳ ದರ ದುಪ್ಪಟ್ಟಾಗಿದೆ. ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗುವವರಿಗೆ ಖಾಸಗಿ ಬಸ್‌ಗಳಲ್ಲಿ 7 700ರಿಂದ 1,000 ವರೆಗೆ ಇದ್ದ ದರಗಳು ಈಗ 1,500ರಿಂದ 72,500 ವರೆಗೆ ಏರಿಕೆಯಾಗಿವೆ. ಮಂಗಳೂರಿಗೆ 7 700ರಿಂದ ಕೆ 950ರವರೆಗೆ ಇದ್ದಿದ್ದು 1400ರಿಂದ 2000ಕ್ಕೇರಿದೆ. ಶಿರಸಿಗೆ 700+ 900 ಇದ್ದಿದ್ದು 2,100ರವರೆಗೆ ಹೆಚ್ಚಳವಾಗಿದೆ. ಇದೇ ರೀತಿ ರಾಜ್ಯದ ವಿವಿಧ ನಗರಗಳಿಗೆ ತೆರಳುವವರಿಗೆ ಬಸ್ ದರ ಬರೆ ಎಳೆದಿದೆ.. ಖಾಸಗಿ ಬಸ್‌ಗಳಲ್ಲಿ ದರ ಏರಿಕೆಯಾಗಿರುವುದರಿಂದ KSRTCಯ ಬಸ್‌ಗಳಲ್ಲಿ ಸೀಟ್‌ಗಳು ಭರ್ತಿಯಾಗಿವೆ. ವಿಶೇಷ ಬಸ್‌ಗಳಲ್ಲಿಯೂ ಸೀಟ್ ಇಲ್ಲದಂತಾಗಿದೆ. ಸಾರಿಗೆ ಬಸ್‌ಗಳಲ್ಲಿ ಸೀಟುಗಳು ಲಭ್ಯವಿವೆ.