Select Your Language

Notifications

webdunia
webdunia
webdunia
webdunia

ಕಸ ಸಮಸ್ಯೆ ಸಿಎಂ ಅಂಗಳಕ್ಕೆ

ಕಸ ಸಮಸ್ಯೆ ಸಿಎಂ ಅಂಗಳಕ್ಕೆ
ಬೆಂಗಳೂರು , ಮಂಗಳವಾರ, 7 ಡಿಸೆಂಬರ್ 2021 (18:04 IST)
ತಾಲೂಕಿನ ಚಿಗರೇನಹಳ್ಳಿಯಲ್ಲಿನ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ನಮಗೆ ಮನವರಿಕೆಯಾಗಿದ್ದು ಒಂದೇ ದಿನದಲ್ಲಿ ಸಮಸ್ಯೆ ಬಗೆಹರಿಸಲಾಗುವುದಿಲ್ಲ.
 
ವಿಧಾನಪರಿಷತ್‌ ಚುನಾವಣೆ ನಂತರ ಸ್ಥಳೀಯ ಮುಖಂಡರೊಂದಿಗೆ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳಿ ಸಭೆ ನಡೆಸಿ, ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು’ ಎಂದು ಪೌರಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ.ನಾಗರಾಜ್‌ ಹೇಳಿದರು.
 
ತಾಲೂಕಿನ ಚಿಗರೇನಹಳ್ಳಿಯಲ್ಲಿನ ಬಿಎಂಪಿ ಕಸ ವಿಲೇವಾರಿಯ ಎಂಎಸ್‌ಜಿಪಿ ಘಟಕ ಮುಚ್ಚುವಂತೆ, ತಾಲೂಕಿನ ಮೂಗೇನಹಳ್ಳಿ ಬಾರೆ ಬಳಿ ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ಗ್ರಾಮಸ್ಥರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು.ಈ ಮುನ್ನ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕಕ್ಕೆ ಶಾಸಕರು, ಜಿಲ್ಲಾಧಿಕಾರಿ, ಬಿಬಿಎಂಪಿ ಅಧಿಕಾರಿಗ ಳೊಂದಿಗೆ ಭೇಟಿ ನೀಡಿ, ಕಸ ವಿಲೇವಾರಿ ಬಗ್ಗೆ ಮಾಹಿತಿ ಪಡೆದರು.ಸಚಿವರು ಸ್ಥಳಕ್ಕೆ ಆಗಮಿಸಿದ ವೇಳೆ, ಭಕ್ತರಹಳ್ಳಿ ಗ್ರಾಪಂ ಸದಸ್ಯ ಲತಾಶ್ರೀ ಮಾತನಾಡಿ, ಎಂಎಸ್‌ಜಿಪಿ ಘಟಕದಿಂದಾಗಿ ಇಲ್ಲಿ ಜನ ವಾಸಿ ಸಲು ಆಗುತ್ತಿಲ್ಲ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಘಟಕದ ಕಸದ ನೀರು, ಮಳೆ ನೀರಿಗೆ ಸೇರಿ, ಕೆರೆ ಕುಂಟೆ ಕಾಲುವೆಗಳಲ್ಲಿ ವಿಷಕಾರಿ ನೀರು ಹರಿಯುತ್ತಿದೆ. ಕಾಲುವೆಗಳಲ್ಲಿ ವಿಷಯುಕ್ತ ನೀರು ಹರಿಯುತ್ತಿವೆ.
 
ಮಹಿಳೆಯರಿಗೆ ಗರ್ಭಪಾತದ ಸಮಸ್ಯೆ, ಮಕ್ಕಳಿಗೆ ಹಾಗೂ ವೃದ್ಧರಿಗೆ ವಿವಿಧ ರೋಗ ರುಜಿನ ಹೆಚ್ಚಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದ ದುಷ್ಪರಿಣಾಮ ಕುರಿತು ಸಂಬಂಧ ಪಟ್ಟವರ ಗಮನಕ್ಕೆ ತರಲಾಗಿದೆ. 2019ರಲ್ಲಿ ಟೆರ್ರಾಫರ್ಮಾ ಘಟಕದ ವಿರುದ್ಧ ಹೋ ರಾಟ ಮಾಡಿದಾಗ, ಅಂದು ಜಿಲ್ಲಾ ಉಸ್ತುವಾರಿ ಸಚಿವ ರಾಗಿದ್ದ ಆರ್‌.ಅಶೋಕ್‌ ಭರವಸೆ ನೀಡಿ ಘಟಕ ಸ್ಥಗಿತ ಗೊಳಿಸಲಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಡಿ. ಕೆ.ಶಿವಕುಮಾರ್ ಸಿ. ಟಿ. ರವಿ ಟಾಂಗ್