Webdunia - Bharat's app for daily news and videos

Install App

ಗಾಂಜಾ ಘಾಟಿನ ಹಾವಳಿ

Webdunia
ಭಾನುವಾರ, 14 ಆಗಸ್ಟ್ 2022 (13:11 IST)
ಗಿರಿನಾಡು ಯಾದಗಿರಿಯಲ್ಲಿ ಗಾಂಜಾ ಘಾಟಿನ ಹಾವಳಿ ಹೆಚ್ಚಾಗಿದೆ. ಪಾನ್-ಬೀಡಾ ಅಂಗಡಿಗಳಲ್ಲಿ ಗಾಂಜಾ ಜಾಕಲೇಟ್ ಎಗ್ಗಿಲ್ಲದೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ಮಾದಕ ವ್ಯಸನಿಗಳ ಹಾಟ್ ಸ್ಪಾಟ್ ಆಯಿತಾ ಕರುನಾಡು ಅನ್ನೋ ಪ್ರಶ್ನೆ ಮೂಡಿದೆ.ವಿದ್ಯಾರ್ಥಿಗಳು ಹಾಗೂ ಮಧ್ಯ ವಯಸ್ಕರೇ ಗಾಂಜಾ ಆರೋಪಿಗಳ ಟಾರ್ಗೆಟ್ ಆಗಿದ್ದು, ಉತ್ತರ ಪ್ರದೇಶದ ಗಾಂಜಾ ನಶೆಯ ಜಾಕಲೇಟ್ ಯಾದಗಿರಿ ಜಿಲ್ಲೆಯಲ್ಲಿ ಮಾರಾಟವಾಗುತ್ತಿವೆ ಎಂದು ತಿಳಿದುಬಂದಿದೆ. ಶಹಾಪೂರ ನಗರದಲ್ಲಿ ಪಾನ್‍ಶಾಪ್‍ ಇಟ್ಟುಕೊಂಡು ಗಾಂಜಾ ಚಾಕಲೇಟ್ ಮಾರಾಟ ಮಾಡುತ್ತಿದ್ದವರು ಆರೋಪಿಗಳು ಅಂದರ್ ಆಗಿದ್ದಾರೆ. 3 ಪಾನ್‍ಶಾಪ್‍ಗಳ ಮೇಲೆ ಅಬಕಾರಿ ಪೋಲಿಸರ ಮಿಂಚಿನ ದಾಳಿ ನಡೆಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉತ್ತರ ಪ್ರದೇಶ ಮೂಲದ ಜೀತೆಂದ್ರ ಹಾಗೂ ಮೋಹಿತ್ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ NDPS ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಶಹಾಪೂರ ಅಬಕಾರಿ ಉಪ ಅಧೀಕ್ಷಕ ಮಲ್ಲಿಕಾರ್ಜುನ್ ರಡ್ಡಿ, ಕೇದಾರನಾಥ್ ಮತ್ತು ದನರಾಜ್ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಿಎಸ್ ಟಿ ಕಡಿತದ ಬಗ್ಗೆ ಮೊನ್ನೆ ವಿರೋಧ, ಇಂದು ಹೊಗಳಿಕೆ: ಸಿದ್ದರಾಮಯ್ಯ ಸರ್ ಇದು ಹೆಂಗೆ ಎಂದ ನೆಟ್ಟಿಗರು

Karnataka Weather: ವಾರಂತ್ಯಕ್ಕೆ ಹೇಗಿರಲಿದೆ ರಾಜ್ಯದಲ್ಲಿ ಹವಾಮಾನ

ಇವಿಎಂ ಬದಲು ಬ್ಯಾಲೆಟ್ ಪೇಪರ್: ರಾಹುಲ್ ಗಾಂಧಿ ಬೇಡಿಕೆ ಕರ್ನಾಟಕ ಈಡೇರಿಸಿತು ಎಂದ ರಣದೀಪ್

ಜಿಎಸ್ ಟಿ ಬಗ್ಗೆ ಒಂದು ದಿನದ ಬಳಿಕ ಪ್ರತಿಕ್ರಿಯೆ: ಇದು ಮೋದಿ ಅಲ್ಲ ರಾಹುಲ್ ಗಾಂಧಿ ಸಾಧನೆ ಎಂದ ಸಿದ್ದರಾಮಯ್ಯ

ಮೋದಿ ಜನಪ್ರಿಯತೆ ಸಹಿಸದೇ ಕಾಂಗ್ರೆಸ್ ಹೀಗೆಲ್ಲಾ ಮಾಡ್ತಿದೆ: ಪಿ ರಾಜೀವ್

ಮುಂದಿನ ಸುದ್ದಿ