Select Your Language

Notifications

webdunia
webdunia
webdunia
webdunia

ಆಟೋ ಚಾಲಕರಿಂದ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಆಟೋ ಚಾಲಕ
ಚಿಕ್ಕಬಳ್ಳಾಪುರ , ಬುಧವಾರ, 25 ಮೇ 2016 (10:36 IST)
ದಲಿತ ಯುವತಿ ಮೇಲೆ ಮೂವರು ಕಾಮುಕ ಆಟೋ ಚಾಲಕರು ಎರಡು ದಿನಗಳ ಕಾಲ ನಿರಂತರವಾಗಿ ಅತ್ಯಾಚಾರವೆಸಗಿರುವ ಹೇಯ ಕೃತ್ಯ ಚಿಕ್ಕಬಳ್ಳಾಪುರದಲ್ಲಿ ವರದಿಯಾಗಿದೆ.
 
ತನ್ನ ಪ್ರಿಯತಮನ ಭೇಟಿ ಮಾಡಲು ತುಮಕೂರ ಮೂಲದ ದಲಿತ ಯುವತಿ ಚಿಕ್ಕಬಳ್ಳಾಪುರಕ್ಕೆ ಬಂದಿದ್ದಳು. ಕಳೆದ ಶುಕ್ರವಾರ ತನ್ನ ಪ್ರಿಯತಮ ಗಿರೀಶ್‌ನನ್ನು ಭೇಟಿಯಾಗಿ ಹೊರಡುವಾಗ ಯುವತಿಯನ್ನು ಪುಸಲಾಯಿಸಿ ಕರೆದೊಯ್ದು ಮೂವರು ಆಟೋ ಚಾಕಲರು ದಲಿತ ಮಹಿಳೆಯ ಮೇಲೆ ಎರಡು ದಿನಗಳ ಕಾಲ ನಿರಂತರ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪ ಕೇಳಿಬಂದಿದೆ.
 
ಸದ್ಯ ಸಂತ್ರಸ್ತ ಯುವತಿಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ್ದು. ಯುವತಿ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾಳೆ.
 
ಯುವತಿ ನೀಡಿರುವ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಟೋ ಚಾಲಕರಾದ ಶಿವು, ಶಶಿಧರ್, ರಮೇಶ್ ಬಾಬು ಎಂಬುವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 
 
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ನಿರ್ಧಾರವಾಗಲಿದೆ ಪಿಯು ವಿದ್ಯಾರ್ಥಿಗಳ ಭವಿಷ್ಯ