Webdunia - Bharat's app for daily news and videos

Install App

ನುಡಿದಂತೆ ಬದುಕಿ ಮಹಾತ್ಮರೆನಿಸಿಕೊಂಡರು ಗಾಂಧೀಜಿ:ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್

Webdunia
ಶನಿವಾರ, 2 ಅಕ್ಟೋಬರ್ 2021 (21:31 IST)
ಬೆಂಗಳೂರು: ಪ್ರತಿಯೊಬ್ಬರೂ ಸತ್ಯವನ್ನೇ ನುಡಿಯಬೇಕು. ಸತ್ಯ ಮಾರ್ಗದಲ್ಲಿ ನಡೆಯಬೇಕು ಎಂಬ ಚಿಂತನೆ ಗಾಂಧೀಜಿಯದ್ದಾಗಿತ್ತು. ಸತ್ಯಕ್ಕೆ ಮತ್ತೊಂದು ಹೆಸರಿನಂತೆ ಮಹಾತ್ಮ ಗಾಂಧಿ ಎಂದು ಬದುಕಿ ತೋರಿಸಿದರು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿಧಾನ ಪರಿಷತ್ ಸದಸ್ಯರೂ ಆದ ಎನ್. ರವಿಕುಮಾರ್ ತೈಲ
 
 
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ನಡೆದ ಮಹಾತ್ಮ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದಲ್ಲಿ ರವಿಕುಮಾರ್ ಪ್ರಕಾರ.
 
ತಮ್ಮ ಮೇಲೆ ಎಷ್ಟೇ ಹಿಂಸೆ ನಡೆದರೂ ಬೇರೆಯವರಿಗೆ ಹಿಂಸಾತ್ಮಕವಾಗಿ ಪ್ರತಿಕ್ರಿಯೆ ತೋರದೆ ಅಹಿಂಸಾ ಮನೋಭಾವವನ್ನು ಗಾಂಧೀಜಿ ಪಾಲಿಸಿದ್ದರು. ಮಹಾತ್ಮ ಗಾಂಧೀಜಿ ಅವರ ಅಹಿಂಸಾತ್ಮಕ ಹೋರಾಟಕ್ಕೆ ಬ್ರಿಟಿಷರು ಬೆದರಿದರು. ಲಾಠಿಯೇಟು ತಿಂದರೂ, ಬೂಟ್‍ನಿಂದ ಹೊಡೆದರೂ ಗಾಂಧೀಜಿ ಅಹಿಂಸಾ ತತ್ವವನ್ನು ಬಿಡಲಿಲ್ಲ ಎಂದು ವಿವರಿಸಿದರು.
 
ಸ್ವದೇಶಿ ಜೀವನಶೈಲಿ, ಸ್ವದೇಶಿ ಉತ್ಪನ್ನಗಳ ಬಳಕೆ ಮಾಡಲು ಗಾಂಧೀಜಿ ಹೇಳಿದ್ದರು. ಅದೇ ವಿಚಾರಗಳನ್ನು ಮಾರ್ಗದರ್ಶಕವಾಗಿ ಇಟ್ಟುಕೊಂಡು ವಿಶ್ವವಂದ್ಯ ನಾಯಕರಾದ ಹಾಗೂ ನಮ್ಮ ಪ್ರಧಾನಿಗಳಾದ ನರೇಂದ್ರ ಮೋದಿ ಮುನ್ನಡೆಯುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
 
ಮಹಾತ್ಮ ಗಾಂಧಿಯ ಸ್ವದೇಶಿ ಜೀವನಶೈಲಿಯನ್ನು ಇಂದು ದೇಶದಾದ್ಯಂತ ನೆನಪಿಸಿಕೊಳ್ಳಲಾಗುತ್ತಿದೆ. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಒಂದು ಸಮರ್ಥ ದಿಕ್ಕನ್ನು ತೋರಿಸಿದವರು. ಅಹಿಂಸಾತ್ಮಕ ಆಂದೋಲನ ಮತ್ತು ಸತ್ಯಾಗ್ರಹದ ಹೋರಾಟದ ಮೂಲಕ ಪ್ರಪಂಚವನ್ನು ಭಾರತದ ಕಡೆಗೆ ನೋಡುವಂತೆ ಮಾಡಿದ ವ್ಯಕ್ತಿ ಮಹಾತ್ಮ ಗಾಂಧಿ. ಭಾರತ ಇರುವವರೆಗೂ ಬಾಪು ಜೀವಂತವಾಗಿ ಇರುತ್ತಾರೆ ಎಂದು ತಿಳಿಸಿದರು.
 
ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಜೈ ಜವಾನ್ ಜೈ ಕಿಸಾನ್ ಘೋಷಣೆ ಮಾಡಿದ ಮಹಾನ್ ವ್ಯಕ್ತಿ. ಚೀನಾ ಜೊತೆಗಿನ ಯುದ್ಧದ ಸಂದರ್ಭದಲ್ಲಿ ಒಂದು ಹೊತ್ತಿನ ಸಮಯವನ್ನು ತ್ಯಜಿಸಲು ಲಾಲ್ ಬಹದ್ದೂರ್ ಶಾಸ್ತ್ರಿ ದೇಶವಾಸಿಗಳಿಗೆ ಕರೆ ನೀಡಿದ್ದರು. ಅದನ್ನು ಶಾಸ್ತ್ರಿ ಸೋಮವಾರ ಎಂದೇ ಹೇಳಲಾಗಿದೆ.
 
ಬರಗಾಲದಿಂದ ದೇಶ ಸಂಕಷ್ಟ ಅನುಭವಿಸುತ್ತಿತ್ತು. ರೈತರ ಏಳಿಗೆಗಾಗಿ ಶಾಸ್ತ್ರೀಜಿ ಭೂಮಿಯ ನೀರಾವರಿ ಕಡೆಗೆ ಹೆಚ್ಚಿನ ಗಮನ ಕೊಟ್ಟಿದ್ದರು ಎಂದು ವಿವರಿಸಲಾಗಿದೆ. 
 
ಜೈ ಜವಾನ್ ಮತ್ತು ಜೈ ಕಿಸಾನ್ ನಂತರದ ಘೋಷಣೆಗಳು ಇಂದಿಗೂ ಪ್ರಚಲಿತವಾಗಿದೆ. 
 
ಮಹಾತ್ಮ ಗಾಂಧಿ ಮತ್ತು ಶಾಸ್ತ್ರೀಜಿ ಅವರ ವಿಚಾರಧಾರೆ ಮತ್ತು ಚಿಂತನೆಗಳು ಸದಾ ಅಮರ ಎಂದು ವಿಶ್ಲೇಷಿಸಲಾಗಿದೆ
 
ಪಕ್ಷದ ರಾಜ್ಯ ಆಯ್ಕೆ ನಿರ್ಮಲ್ ಕುಮಾರ್ ಸುರಾಣ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ಶಾಸಕ ಪಿ. ರಾಜೀವ್ ಮತ್ತು ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ ಮತ್ತು ಪಕ್ಷದ ನಾಯಕರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.      
ರವಿಕುಮಾರ್

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೊಹ್ಲಿ, ಅನುಷ್ಕಾ ಆಶೀರ್ವಾದ ಪಡೆದಿದ್ದ ಪ್ರೇಮಾನಂದ ಮಹಾರಾಜ್ ಬಾಯಿಂದ ಇದೆಂಥಾ ಮಾತು

ಆಪರೇಷನ್ ಸಿಂದೂರ್‌ನಿಂದ ಪಾಕ್‌ ಉಗ್ರರರು ಇನ್ನೂ ನಿದ್ರೆಯಿಲ್ಲದ ರಾತ್ರಿ ಕಳೆಯುತ್ತಿದ್ದಾರೆ: ಮೋದಿ

ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಕಿರುಕುಳ: ಸಕಲೇಶಪುರ ವ್ಯಕ್ತಿ ಅರೆಸ್ಟ್‌

ರೈತರ ಹೆಸರಿನಲ್ಲಿ ರಾಜಕೀಯ ಮಾಡುವ ವಿಜಯೇಂದ್ರ ಮೋದಿ ಮನೆ ಮುಂದೆ ಪ್ರತಿಭಟಿಸಲಿ: ಶಿವರಾಜ ತಂಗಡಗಿ

ಕಲಾಸಿಪಾಳ್ಯ ಬಿಎಂಟಿಸಿ ಬಸ್ ಸ್ಟ್ಯಾಂಡ್‌ನಲ್ಲಿ ಸ್ಪೋಟಕ ಪತ್ತೆ ಕೇಸ್: ಮೂವರು ಅರೆಸ್ಟ್

ಮುಂದಿನ ಸುದ್ದಿ
Show comments