Webdunia - Bharat's app for daily news and videos

Install App

ಇನ್ಮುಂದೆ ಮನೆ ಬಾಗಿಲಿಗೆ ಬರುತ್ತೆ ಮ್ಯಾಂಗೋಸ್

Webdunia
ಮಂಗಳವಾರ, 11 ಏಪ್ರಿಲ್ 2023 (14:10 IST)
ಬೆಳಿಗ್ಗೆ ಟೂಥ್ ಪೆಸ್ಟ್ ನಿಂದ ಹಿಡಿದು ರಾತ್ರಿ ಮಲಗೋವಾಗ ಬಳಸೋ ಗುಡ್ ನೈಟ್ ವರೆಗೂ ಎಲ್ಲಾ ಆನ್ ಲೈನ್ ನಲ್ಲಿ ಆರ್ಡರ್ ಮಾಡ್ತೇವೆ. ಆದ್ರೇ ಇದೀಗ ಮ್ಯಾಂಗೋಸ್ ಆನ್ಲೈನ್ ನಲ್ಲಿ ಬುಕ್ ಆಗ್ತಿದ್ದು, ನಿಮ್ಮ ಮನೆ ಬಾಗಿಲಿಗೆ ಪೋಸ್ಟ್ ಮ್ಯಾನ್ ಗಳು ತಲುಪಿಸ್ತಾ ಇದ್ದಾರೆ.
 
ಮಾವಿನ ಹಣ್ಣು...ಹೆಸರು ಕೇಳಿದ್ರೆನೇ ಸಾಕು ಎಂಥವರ ಬಾಯಯಲ್ಲೂ ನೀರು ಬರುತ್ತೆ..ಬಿಸಿಲಿನ ಬೇಗೆ ಒಂದು ಕಡೆಯಾದ್ರೆ, ಈ ಸೀಸನ್ನ ಬೆಸ್ಟ್ ಫ್ರೂಟ್  ಹಣ್ಣುಗಳ ರಾಜ ಅಂತಾನೇ ಕರಿಯೋ ಮಾವಿನ ಹಣ್ಣುಗಳನ್ನು ಸವಿಯಲು ಎಲ್ಲರೂ ತುದಿಗಾಲಿಲ್ಲಿ ನಿಂತಿರ್ತಾರೆ. ಮಾವಿನ ಹಣ್ಣಿನ ರುಚಿಗೆ ಮನ ಸೋಲದವರು ಯಾರಿಲ್ಲ..ಎಲ್ಲರ ಟಾಪ್ ಫೆವರೇಟ್ ಫ್ರೂಟ್ ಆಗಿರೋ ಮಾವಿನಹಣ್ಣುಗಳನ್ನು ನೇರವಾಗಿ ಮನೆ ಬಾಗಿಲಿಗೆ ತಲುಪಿಸಲು ರೈತರು ರೆಡಿಯಾಗಿದ್ದಾರೆ..ಟೆಕ್ನಾಲಜಿಯ ಮೊರೆ ಹೋಗಿರುವ ಮಾವು ಬೆಳೆಗಾರರ ಸಪೋರ್ಟ್ಗೆ ಪೋಸ್ಟ್ ಆಫೀಸ್ ಸಿದ್ಧಗೊಂಡಿದೆ..ಪೋಸ್ಟ್ ಆಫೀಸ್ ಹಾಗೂ ರೈತರಿಂದ ಗ್ರಾಹಕರಿಗೆ ಹಣ್ಣು ತಲುಪಿಸೋ ಕಾರ್ಯ ಆರಂಭವಾಗಿದೆ.. ನೇರವಾಗಿ ರೈತರು ಬೆಳೆದ ಹಣ್ಣುಗಳನ್ನು ಆ್ಯಪ್ ಮೂಲಕ ಬುಕ್ ಮಾಡಿದ್ರೆ ಒಂದು ದಿನದಲ್ಲೇ ಆರ್ಡರ್ ತಲುಪಿಸುವ ಕೆಲಸ ಆಗ್ತಿದೆ.ಮಾರ್ಚ್ 31 ರಿಂದ ಈ ಅಂಚೆಸೇವೆ ಆರಂಭಗೊಂಡಿದ್ದು,ಸಾವಿರಾರು ಮ್ಯಾಂಗೋ ಬಾಕ್ಸ್ ಗಳು ಡೇಲಿವರ್ ಆಗ್ತಿವೆ.
 
ಕೋಲಾರ್ ಮ್ಯಾಂಗೋಸ್, ಮ್ಯಾಂಗೋ ಗುರು, ಮ್ಯಾಂಗೋ ಬೋರ್ಡ್ನ ಆ್ಯಪ್ಗಳಲ್ಲಿ ಹಣ್ಣುಗಳನ್ನು ಬುಕ್ ಮಾಡ್ಬೋದು.. ಸುಮಾರು 3 ಕೆ.ಜಿಯಷ್ಟು ಹಣ್ಣುಗಳನ್ನು ನಿಮ್ಮ ಮನೆಗೆ ತಲುಪಿಸೋ ಕಾರ್ಯ ಪೋಸ್ಟ್ ಆಫೀಸ್ ಮಾಡುತ್ತೆ..ಇದ್ರಿಂದ ಅನೇಕ ರೈತರಿಗೂ ತಾವು ಬೆಳೆದ ಹಣ್ಣಿಗೆ ಸರಿಯಾದ ಬೆಲೆ ಸಿಗುತ್ತೆ. ಜೊತೆಗೆ ಗ್ರಾಹಕರಿಗೂ ಉತ್ತಮವಾದ ಹಣ್ಣುಗಳು ಸಿಗಲಿದೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments