Publish Date: Mon, 06 Nov 2017 (13:48 IST)
Updated Date: Mon, 06 Nov 2017 (13:50 IST)
ಮುಂದಿನ ವರ್ಷದಿಂದ ಟಿಪ್ಪು ಬದಲಿಗೆ ಒಡೆಯರ್ ಜಯಂತಿ ಆಚರಿಸಲಾಗುವುದು ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪುಹೇಳಿಕೊಳ್ಳುವಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ.ಟಿಪ್ಪು ಡ್ರಾಪ್ ಮಾತ್ರ ಹೆಸರುವಾಸಿಯಾಗಿದೆ ಎಂದು ಲೇವಡಿ ಮಾಡಿದ್ದಾರೆ.
ಒಡೆಯರ್ ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರಿಂದ ಅವರ ಜಯಂತಿ ಆಚರಿಸಲಾಗುವುದು.ಟಿಪ್ಪು ಜಯಂತಿ ಆಚರಿಸುವುದಕ್ಕಿಂತ ಒಡೆಯರ್ ಜಯಂತಿ ಆಚರಿಸಿ ಎಂದು ಕರೆ ನೀಡಿದ್ದಾರೆ.
ಮೈ,ಸೂರಿನ ಯದುವಂಶದ ಅರಸರು ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿದಂತಹವರು. ಅವರ ಕೊಡುಗೆ ಅಪಾರವಾಗಿದ್ದರಿಂದ ಜಯಂತಿ ಆಚರಿಸುವುದು ಸೂಕ್ತವಾಗಿದೆ. ಇದೇ ಕೊನೆಯ ಟಿಪ್ಪು ಜಯಂತಿ ಆಚರಣೆಯಾಗಲಿದೆ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.