Publish Date: Tue, 05 May 2020 (14:47 IST)
Updated Date: Tue, 05 May 2020 (14:49 IST)
ಗೆಳೆಯರಿಬ್ಬರು ತನ್ನ ಸ್ನೇಹಿತನೊಬ್ಬನನ್ನು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.
ಮೂವರು ಹುಡುಗರು ಮದ್ಯದ ನಶೆಯಲ್ಲಿದ್ದರು. ಆಗ ಲವ್ ಮ್ಯಾಟರ್ ಪ್ರಸ್ತಾಪವಾಗಿದೆ. ಇದರಿಂದ ವಾಗ್ವಾದ ಶುರುವಾಗಿ ಕೊನೆಗೆ ಯುವಕನೊಬ್ಬನ ಕೊಲೆಯಲ್ಲಿ ಅಂತ್ಯಗೊಂಡಿದೆ.
ಸತೀಶ್ ಎಂಬಾತ ಕೊಲೆಯಾಗಿದ್ದಾನೆ. ಈತನ ಸ್ನೇಹಿತರಾದ ಕಿರಣ್, ಮಧು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಮೈಸೂರಿನ ಕ್ಯಾತಮಾರನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.